ಹೊಸ ವರ್ಷದ ಆಶಾ ಲೈಫ್ ಟೈಮ್ ಕ್ಯಾಲೆಂಡರ್ ಬಿಡುಗಡೆ

ಕಲಬುರಗಿ:ಡಿ.31:ವಿಶೇಷವಾದ ಆಶಾಲೈಫ್ ಟೈಮ್ ಕ್ಯಾಲೆಂಡರನ್ನು ಪೆÇ್ರಫೆಸರ್ ದೇವಿಂದ್ರ ವಿಶ್ವಕರ್ಮ ಬಿಡುಗಡೆ ಗೊಳಿಸಿದರು ಅವರು ಜೇವರ್ಗಿ ನಗರದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮಕ್ಕಳಿಗೆ ಕೋಟಿ ವರ್ಷಗಳ ಆಶಾ ಲೈಫ್ ಟೈಮ್ ಕ್ಯಾಲೆಂಡರನ್ನು ವಿತರಿಸಿ ಮಾತನಾಡಿದ ಅವರು. ವಿದ್ಯಾರ್ಥಿನಿ ಆಶಾ ಮುದ್ದಾದ ನಿಷ್ಕಲ್ಮಶ ಮನಸ್ಸಿನವರು ಸ್ವರ್ಗದಿಂದ ಬಂದ ಹೂ ಇದ್ದಂತೆ ಎಂದು ಉಪನ್ಯಾಸಕ ದೇವಿಂದ್ರ ವಿಶ್ವಕರ್ಮ ಹೇಳಿದರು, ಜೇವರ್ಗಿ ತಾಲೂಕಿನ ಅದ್ಭುತ ಗ್ರಾಮೀಣ ಪ್ರತಿಭೆ ಜೀವವಿಜ್ಞಾನ ವಿಷಯದಲ್ಲಿ ಉತ್ತಮ ಅಣು ಬೋಧನೆ, ಪಾಠ ಯೋಜನೆ, ಪ್ರಯೋಗಗಳನ್ನು ಮಾಡಿ ಎಲ್ಲಾ ಉಪನ್ಯಾಸಕರ ಕಡೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದಾಳೆ, ವಿದ್ಯಾರ್ಥಿ ಆಶಾ ಅವರ ಹತ್ತಿರ ಅದ್ಭುತವಾದ ಕೌಶಲ್ಯಗಳು, ಅವಳಲ್ಲಿರುವ ಬುದ್ದಿಶಕ್ತಿ, ಜ್ಞಾನ, ಪ್ರತಿಭೇಯು ಶ್ರಮದಿಂದ ಪಡೆದಕೊಂಡಿದ್ದಾಳೆ.ಆಶಾ ರೀತಿಯ ಇಂಟಲಿಜೆಂಟ್ ವಿದ್ಯಾರ್ಥಿನಿಯರು ಕೋಟಿಗೊಬ್ಬರು ಇರುತ್ತಾರೆ, ಶ್ರಮವೂ ಶ್ರದ್ದೆಯಿಂದ ಬರುತ್ತದೆ. ಶ್ರದ್ದೆಯು ಒಳ್ಳೆಯ ಮನಸ್ಸಿನಿಂದ ಬರುತ್ತದೆ. ಆಶಾ ಅವಳಲ್ಲಿರುವ ಜ್ಞಾನ, ಅತ್ಯುತ್ತಮ ಗುಣಗಳು ಯಾರು ಕದಿಯಲಾಗದ ಸಂಪತ್ತುಗಳು.ಆಶಾ ಅವಳಲ್ಲಿರುವ ಸಾಮಾನ್ಯ ಜ್ಞಾನ, ತಿಳುವಳಿಕೆ ಮತ್ತು ಜೀವವಿಜ್ಞಾನ, ಭೌತವಿಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ಆಸಕ್ತಿಕರ ವಿಷಯಗಳು ಅವರ ಜೊತೆ ಉತ್ತಮ ಸ್ನೇಹಮಾಡಿ ಪಡೆದುಕೋಳಬೇಕು. ಹೋರತು ಕೊಂಡುಕೊಳ್ಳಲು ಆಗುವುದಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಬಾಲ ಪ್ರತಿಭೆಯಾಗಿ ಶಿಕ್ಷಕರಿಂದ ಪ್ರಶಂಸೆಗೆ ಪಾತ್ರ ಆಗಿ, ಮುಂದೆ ಪ್ರೌಢಶಾಲೆಯಿಂದ ಪ್ರಾರಂಭವಾಗಿ ಪದವಿವರೆಗೂ ಶೈಕ್ಷಣಿಕವಾಗಿ ಅತ್ಯುತ್ತಮ ಫಲಿತಾಂಶ ಮಾಡಿ ಎಲ್ಲರಿಂದಲೂ ಆಶಾ ಮೆಚ್ಚುಗೆ ಪಡೆದುಕೊಂಡಿದ್ದಾಳೆ.ಪ್ರಸ್ತುತ ಬಿ,ಎಡ್ ಪದವಿಯಲ್ಲಿ 87% ಪಡೆದು ಡಿಸ್ಟಿಂಕ್ಷನಲ್ಲಿ ಪಾಸಗಿದ್ದಾರೆ ಅದಕ್ಕೆ ಹೇಳೋದು ವಿದ್ಯಾರ್ಥಿಯ ಜೀವನ ಬಂಗಾರದಂತ ಜೀವನ ಅದು ಮತ್ತೊಮ್ಮೆ ಬರಲಾರದು. ಆಶಾಳಂತಹ ಮಕ್ಕಳು ಕೋಟಿಗೆ ಒಬ್ಬರಂತೆ ಹುಟ್ಟುತ್ತಾರೆ. ಅದಕ್ಕಾಗಿ ಅವರ ಹೆಸರಲ್ಲಿ ಕೋಟಿ ವರ್ಷಗಳ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಗುತ್ತಿದೆ,ಇಂಥ ಮಕ್ಕಳ ಪ್ರತಿಭೆಗೆ ಪ್ರತಿಯೋಬ್ಬರು ಬೆಳೆಸುವ ಪ್ರಯತ್ನ ಮಾಡಬೇಕು. ಆಶಾಳನ್ನು ಹೆತ್ತ ತಾಯಿ, ತಂದೆ ಪುಣ್ಯವಂತರು ಅವಳನ್ನು ಅವಳ ಪ್ರತಿಭೆಯನ್ನು ಗೌರವಿಸುತ್ತಿರುವುದು ತುಂಬಾ ಸಂತೋಷವೆಂದು ಹೇಳಬಹುದು. ಆಶಾಳ ಸಾಧನೆ ಹೀಗೆ ಮುಂದುವರೆಯಲ್ಲಿ, ಆ ದೇವರು ನೂರಾರು ವರ್ಷಗಳ ಬದುಕು ನೀಡಲಿ ಎಂದು ಈ ಹೊಸ ವರ್ಷದಲ್ಲಿ ಶುಭಾಶಯ ತಿಳಿಸುತಿದ್ದೇವೆ ಎಂದು ಉಪನ್ಯಾಸಕ ದೇವಿಂದ್ರ ವಿಶ್ವಕರ್ಮ ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ವೈಷ್ಣವಿ, ತ್ರಿಶಾ, ಸೃಜನಾ,ಮಹಾಲಕ್ಷ್ಮಿ,ರಶ್ಮಿಕಾ,ರಚಿತಾ,ರಮ್ಯಾ ಮುಂತಾದವರು ಹಾಜರಿದ್ದರು.