ಹೊಸ ವರ್ಷದ ಆಚರಣೆ ವೇಳೆ ಕ್ಷುಲಕ ಕಾರಣಕ್ಕೆ ತಲವಾರ್ ದಿಂದ ಹಲ್ಲೆ

ವಿಜಯಪುರ, ಜ.1-ಹೊಸ ವರ್ಷದ ಆಚರಣೆ ವೇಳೆ ಕ್ಷುಲಕ ಕಾರಣಕ್ಕೆ ಯುವಕನೊಬ್ಬನಿಗೆ ತಲವಾರ್ ದಿಂದ ಹಲ್ಲೆ ನಡೆಸಿರುವ ಘಟನೆ ನಗರದ ಡಿಸಿ ಕಚೇರಿ ಬಳಿಯ ಡಿಡಿಪಿಐ ಕಚೇರಿ ಬಳಿ ರಾತ್ರಿ ನಡೆದಿದೆ.

ತಲವಾರದಿಂದ ಗಾಯಗೊಂಡಿರುವ ಯುವಕನನ್ನು ವಸಿಮ್ ಲೋಣಿ (30) ಎಂದು ಗುರುತಿಸಲಾಗಿದೆ. ಇಬ್ಬರು ಯುವಕರ ನಡುವೆ ಹಳೇ ವೈಷಮ್ಯ ಇದ್ದ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಮಾಡಲು ಬಂದ ವೇಳೆ ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದೆ.
ಈ ವೇಳೆ ವಸೀಮ್ ಗೆ ಇನ್ನೊಬ್ಬ ಯುವಕ ತಲವಾರ್ ದಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವಸಿಮ್ ನನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ವಸಿಮ್ ನಿಗೆ ಇನ್ನೊಬ್ಬ ಯುವಕ ಇಸ್ಮಾಯಿಲ್ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರಿಗೆ‌ ಮಾಹಿತಿ ಲಭ್ಯವಾಗಿದೆ.
ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.