ಹೊಸ ವರ್ಷದಲ್ಲಿ ಕಡಲಮುತ್ತು

ನಿರ್ದೇಶಕ ದೇವರಾಜ ಕುಮಾರ್ ಡೇಂಜರ್ ಜೋನ್ ಮತ್ತು ನಿಶಬ್ದ ೨ ಹಾಗೂ ಅನುಷ್ಕಾ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು.
ತಾಜ್ ಮಹಲ್ -2 ನಿರ್ದೇಶನದೊಂದಿಗೆ ನಾಯಕನಟನಾಗೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈ ನಡುವೆ ಹೊಸ ಚಿತ್ರ ಕಡಲಮುತ್ತು ನಲ್ಲಿ ನಾಯಕನಾಗಿ ದೇವರಾಜ್ ಕುಮಾರ್ ಅಭಿನಯಿಸಿ ನಿರ್ದೇಶನ ಮಾಡುತ್ತಿದ್ದಾರೆ.ನಿಶಬ್ದ -೨ ಚಿತ್ರ ನಿರ್ಮಾಣ ಮಾಡಿದ್ದ ತಾರಾನಾಥ ಶೆಟ್ಟಿ ಬೋಳಾರ್ ಇದೀಗ ಕಡಲ‌ಮುತ್ತಿಗೂ ಬಂಡವಾಳ ಹಾಕಲು ಮುಂದಾಗಿದ್ದಾರೆ.

ಸಂಕ್ರಾಂತಿ ಹಬ್ಬದಂದು ಕಡಲಮುತ್ತು ಚಿತ್ರ ಸೆಟ್ಟೇರಲಿದೆ. ದೇವರಾಜ್ ಕುಮಾರ್ ಅವರಿಗೆ ಹೊಸ ನಾಯಕಿಯಾಗಿ ನಟಿಸಲು‌ ನೂತನ ಪ್ರತಿಭೆ ಅನ್ವೇಷಣೆ ನಡೆಸಲಾಗುತ್ತಿದೆ. ಈ ಚಿತ್ರದ ಕಥಾವಸ್ತು ವಿಶೇಷವಾಗಿದ್ದು ಸಂಪೂರ್ಣ ಚಿತ್ರೀಕರಣ ಸಮುದ್ರ ದಂಡೆಯಲ್ಲಿ ನಡೆಯಲಿದೆ.

ವೀನಸ್ ಮೂರ್ತಿ ಛಾಯಾಗ್ರಹಣ, ವಿಕ್ರಂ ಸೆಲ್ವ ಸಂಗೀತ ನಿರ್ದೇಶನ, ರವೀಂದ್ರ ಮುದ್ದಿ ಸಾಹಿತ್ಯ, ಚಂದ್ರು ಬಂಡೆ ಸಾಹಸ ನಿರ್ದೇಶನ, ವಿಜಯ್ ಸಂಕಲನ ಹಾಗೂ ಬಿ.ಧನಂಜಯ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. 45 ದಿನಗಳ ಕಾಲ ಮಂಗಳೂರು ಕುಂದಾಪುರ, ಉಡುಪಿ, ಕಾರವಾರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.