ಹೊಸ ವರ್ಷಕ್ಕೆ ಸ್ವಾಗತ


ಸಂಜೆವಾಣಿ ವಾರ್ತೆ
ಸಂಡೂರು, ಜ.01: ಸಂಡೂರು: ಹೊಸ ಚಿಗಿರು ಹಳೆ ಬೇರು ಕೂಡಿರಲು ಮರ ಸೊಬಗು ಎನ್ನುವಂತೆ 2022ರ ಕೊನೆಯ ದಿನ ಪಟ್ಟಣದ ಬೇಕರಿಗಳು ವಿವಿಧ ರೀತಿಯ ಅಲಂಕಾರಿಕ ಕೇಕ್‍ಗಳು ಮಾರಾಟಕ್ಕೆ ಸಿದ್ದವಾಗಿ ಗ್ರಾಹಕರು ನಾ ಮುಂದು ತಾ ಮುಂದು ಎಂದು ಕೊಂಡುಕೊಳ್ಳುವ ಚಿತ್ರಣ ಕಂಡು ಬಂದಿತು.
ಹೊಸ ವರ್ಷದ ಸ್ವಾಗತದಲ್ಲಿ ಸಂಡೂರು ತಾಲೂಕಿನಾದ್ಯಂತ ಹಲವಾರು ಏಳು ಬೀಳುಗಳು ನಡೆದವು, ಬಹಳಷ್ಟು ಸಿಹಿ ಘಟನೆಗಳೊಂದಿಗೆ ದು:ಖದ ಘಟನೆಗಳು ಸಹ ನಡೆದಿವೆ. ಕರೋನಾದ ಭಯದ ಮಧ್ಯದಲ್ಲಿಯೇ ಶಾಲೆಗಳು ನಡೆದರೆ ವಿಪರೀತ ಮಳೆಯಿಂದ ರೈತರು ಸ್ವಲ್ಪ ಪ್ರಮಾಣದಲ್ಲಿ ಬೆಳೆಗಳ ನಷ್ಟ ಅನುಭವಿಸಿದರು, ತಾಲೂಕಿನಾಧ್ಯಂತ ಹತ್ತು ಹಲವು ಗ್ರಾಮವಾಸ್ತವ್ಯ ಇಲಾಖೆಯಿಂದ ನಡೆದರೆ ಸಂತೋಷ್ ಲಾಡ್ ಅವರ ಹುಡಿ ತುಂಬು ಕಾರ್ಯಕ್ರಮ, ವಿರೋಧ ಪಕ್ಷದ ಬಿಜಪಿಯಿಂದಲೂ ಉಡಿತುಂಬುವ ಕಾರ್ಯಕ್ರಮ, ತಾಲೂಕಿನಾದ್ಯಂತ ಎಲ್ಲಾ ಪಕ್ಷಗಳಿಂದ ಕ್ರಿಕೇಟ್ ಆಟಗಳ ಸಂಭ್ರಮ, ರಾಜ್ಯದ ಕಬ್ಬಡ್ಡಿ ತಂಡದ ನಾಯಕನ ಅಗಮನ, ಸಂಡೂರು ಅಭಿವೃದ್ದಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಂಡೂರು ಸೀ ಎನ್ ಸೆಪ್ಟಂಬರ್ ಸ್ಥಳದಲ್ಲಿ ಗಾಂಧೀಜಿಯವರ ಪ್ರತಿಮೆ ಸ್ಥಾಪನೆ, ನೂತನ ಕ್ರೀಡಾಂಗಣಕ್ಕೆ ವಿಶೇಷ ಪ್ರಗತಿ ಕಾರ್ಯಕ್ರಮ, ಇಡೀ ಪಟ್ಟಣದಲ್ಲಿ ಯುವಕರಿಗೆ ಜಿಮ್‍ಗಳ ಸ್ಥಾಪನೆ, ಶಾಲೆಗಳ ಅಧುನೀಕರ ಹೀಗೆ ಸರ್ಕಾರದ ಯೋಜನೆಗಳ ಅನುಷ್ಠಾನ ಒಂದು ಕಡೆಯಾದರೆ, ರೋಟರಿ ಹಾಗೂ ಖಾಸಗಿ ಬಿಕೆಜಿ ಕಂಪನಿಗಳಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬಡ ರೋಗಿಗಳಿಗೆ ಉತ್ತಮ ಸಹಕಾರಿ ಕೆಲಸಗಳು ನಡೆವು.
ವರ್ಷದ ಅಂತ್ಯದ ಸಂದರ್ಭದಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನದ ಗೋಡೆಯ ಕಲ್ಲು ಸಡಿಲಗೊಂಡು ಬಿದ್ದು ಇಡೀ ತಾಲೂಕಿನ ಜನತೆ ಅಪಾಯದ ಸಂಕೇತವೆಂದು ಭಾವಿಸಿದ್ದರು, ಅದರೆ ಅದು ಮಳೆಯ ಪ್ರಭಾವವಾಗಿದ್ದು ಸ್ಪಷ್ಟವಾಯಿತು.
ವರ್ಷದ ಅಂತ್ಯಕ್ಕೆ ಸಂಡೂರಿನ ರಾಜ ವಂಶಸ್ಥರಾದ ಎಂ.ವೈ.ಘೋರ್ಪಡೆಯವರ ಮೊಮ್ಮಗ ಬಹಿರ್ಜಿ ಘೋರ್ಪಡೆಯವರ ಮದುವೆ ಇಡೀ ತಾಲೂಕಿಗೆ ಪ್ರತಿ ಮನೆಗೂ ಅಮಂತ್ರ ವಿತರಣೆ, ಕೋಟ್ಯಾಂತರ ವ್ಯಯಮಾಡಿ ಮದುವೆ ಸಿದ್ದತೆ ಅದರೆ ಮಳೆ ರಾಯನ ಅವಕೃಪೆಗೆ ಒಳಗಾಗಿ ಮದುವೆಯ ದಿನವೇ ಸ್ವಲ್ಪ ಕಷ್ಟಕ್ಕೆ ಸಿಲುಕುವಂತಾಯಿತು, ಅದರೆ ಇಡೀ ಸಂಡೂರು ಮೈಸೂರಿನಂತೆ ಕಂಗೊಳ್ಳಿಸದ್ದನ್ನು ತಾಲೂಕಿನ ಜನತೆ ಮರೆಯಲಾರರು.
ಒಂದು ಗಣಿಗಾರಿಕೆಯ ಹಬ್ಬರ ಮತ್ತೊಂದು ಕಡೆ ಮಳೆಯಿಂದ ರೈತರ ಕಷ್ಟ, ಗಣಿಕಾರ್ಮಿಕರ ನಿರಂತರ ಹೋರಾಟದ ನಡುವೆಯೇ ಸಂಡೂರು ತನ್ನದೇ ಅದ ಪ್ರಗತಿಯ ಪಥದಲ್ಲಿ ಸಾಗಿರುವುದಂತೂ ಸರಿ.
ಎಲ್ಲರಿಗೂ ಹೊಸ ವರ್ಷ2023 ಶುಭುಉಂಟು ಮಾಡಿ ಸಂಡೂರು ಪ್ರಗತಿಯನ್ನು ಸಾಧಿಸಲಿ ಎನ್ನೋಣ