‘ಹೊಸ ವರುಷ-ಮಕ್ಕಳ ಹರುಷ’ ಬಾನುಲಿ ಧ್ವನಿ ಮುದ್ರಣ –ಡಿ 31 ರಂದು

ಕಲಬುರಗಿ.ಡಿ.29:ಕಲಬುರಗಿ ಆಕಾಶವಾಣಿ ಕೇಂದ್ರದ ‘ಬಾಲ ಲೋಕ’ ಮಕ್ಕಳ ಕಾರ್ಯಕ್ರಮದಲ್ಲಿ 2021ನೇ ಜನವರಿ.3 ರಂದು ಬೆಳಿಗ್ಗೆ 9.05ರಿಂದ 9.35 ರ ವರೆಗೆ ಹೊಸವರ್ಷವನ್ನು ಸ್ವಾಗತಿಸುವ ‘ಹೊಸ ವರುಷ – ಮಕ್ಕಳ ಹರುಷ’ ಎಂಬ ಕಾರ್ಯಕ್ರಮ ಬಿತ್ತರವಾಗಲಿದೆ.
ಈ ಕಾರ್ಯಕ್ರಮಕ್ಕಾಗಿ ಡಿ. 31 ರಂದು ಬೆಳಿಗ್ಗೆ 11 ರಿಂದ 12 ರವÀರೆಗೆ ಧ್ವನಿ ಮುದ್ರಣ ಮಾಡಿಕೊಳ್ಳಲಾಗುವುದು. ನಿಲಯದ 295986 ಮತ್ತು 295987 (ಎಸ್‍ಟಿಡಿ ಸಂಖ್ಯೆ 08472) ದೂರವಾಣಿಗಳಿಗೆ ಕರೆ ಮಾಡಿ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.
ಮಕ್ಕಳಿಗಿರುವ ಹೊಸ ವರುಷದ ಕನಸುಗಳೇನು?, ನಿರೀಕ್ಷೆಗಳು ಯಾವುವು? ನೀವೇನು ಬಯಸುತ್ತೀರಿ? ಎಂಬಿತ್ಯಾದಿ ವಿಷಯ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಅವಕಾಶವಿದೆ. ಕಾರ್ಯಕ್ರಮವನ್ನು ಡಾ.ಸದಾನಂದ ಪೆರ್ಲ ನಿರ್ಮಾಣ ಮಾಡಲಿದ್ದಾರೆ. ಮಕ್ಕಳು ಭಾಗವಹಿಸಿ ಎಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.