ಹೊಸ ಲುಕ್‌ನಲ್ಲಿ ಶಾಲಿನಿ ಪಾಂಡೆ

ಮುಂಬೈ,ಮೇ.೧೬-ಟಾಲಿವುಡ್‌ನಲ್ಲಿ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ನಟಿಯರಲ್ಲಿ ಶಾಲಿನಿ ಪಾಂಡೆ ಕೂಡ ಒಬ್ಬರು. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಶಾಲಿನಿ ಅದೃಷ್ಟ ಬದಲಾಯಿತು. ಮೊದಲ ಸಿನಿಮಾದಿಂದಲೇ ಬೆಳ್ಳಿತೆರೆಯಲ್ಲಿ ಭರ್ಜರಿ ಸದ್ದು ಮಾಡಿದ್ದ ಶಾಲಿನಿ ಪಡ್ಡೆ ಹುಡುಗರ ಮನಗೆದ್ದಿದ್ದರು.
ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಶಾಲಿನಿ ಪಾಂಡೆ ರೊಮ್ಯಾನ್ಸ್ ಪ್ರೇಕ್ಷಕರ ಗಮನಸೆಳೆದಿತ್ತು. ಆ ನಂತರ ಶಾಲಿನಿ ಮಹಾನಟಿಯಂತಹ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅವುಗಳು ಹೆಚ್ಚಿನ ಯಶಸ್ಸು ತಂದುಕೊಡಲಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶಾಲಿನಿ ಆಗಾಗ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನಟಿ ಶೇರ್ ಮಾಡಿರುವ ಲೇಟೆಸ್ಟ್ ಫೋಟೋಶೂಟ್ ಟ್ರೆಂಡಿಂಗ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಲಿನಿ ಸಖತ್ ಬ್ಯೂಟಿ ಎಂದು ಕಮೆಂಟ್ ಮಾಡಿದ್ದಾರೆ.
ಫೋಟೋಶೂಟ್‌ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಶಾಲಿನಿ ಅರ್ಜುನ್ ರೆಡ್ಡಿ ಸಿನಿಮಾದಲ್ಲಿದ್ದ ತಮ್ಮ ಲುಕ್‌ನ್ನೇ ಬದಲಿಸಿಕೊಂಡಿದ್ದಾರೆ. ಅರ್ಜುನ್ ರೆಡ್ಡಿ ಚಿತ್ರದಲ್ಲಿ ಮುದ್ದಾಗಿ ಕಂಡಿದ್ದ ಶಾಲಿನಿ ಈಗ ಫುಲ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ. ಅವರೇನಾ ಇವರು ಎಂಬುವಷ್ಟು ತಮ್ಮ ಲುಕ್‌ನ್ನು ಬದಲಿಸಿಕೊಂಡಿದ್ದಾರೆ.
ಅವರ ಲೇಟೆಸ್ಟ್ ಲುಕ್ ನೋಡಿದರೆ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಶಾಲಿನಿ ಈಗ ಫುಲ್ ಸ್ಲಿಮ್ ಆಗಿದ್ದಾರೆ. ಅರ್ಜುನ್ ರೆಡ್ಡಿ ನಟಿ ಮತ್ತೆ ಸಿನಿಮಾ ಆಫರ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಸೌಂದರ್ಯದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಶಾಲಿನಿ ಪಾಂಡೆ ಮತ್ತೆ ಟ್ರ್ಯಾಕ್‌ಗೆ ಮರಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವಕಾಶ ಸಿಕ್ಕರೆ ಕ್ಯಾಮೆರಾ ಮುಂದೆ ನಟಿಸಲು ರೆಡಿ ಎಂಬ ಸುಳಿವು ನೀಡಿದ್ದಾರೆ.