ಹೊಸ ರೈಲುಗಳು ಓಡಿಸಲು ರೈಲ್ವೆ ಮಂತ್ರಿಗೆ ಮನವಿ

ರಾಯಚೂರು,ಮೇ.೨೮-
ಪ್ರಯಾಣಿಕರ ಅತಿಯಾದ ದಟ್ಟಣೆ ಕಡಮೆ ಮಾಡಲು ಬೀದರ್ ಬೆಂಗಳೂರ ಮತ್ರು ಕಲ್ಬುರ್ಗಿ ಬೆಂಗಳೂರ ನಡುವೆ ಎರಡು ಹೊಸ ರೈಲುಗಳನ್ನು ಓಡಿಸಲು ರೈಲ್ಚೆ ಮಂತ್ರಿ ಅಶ್ವೀನ್ ವೈಷ್ಣವರಿಗೆ ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಮನವಿ ಮಾಡಿದ್ದಾರೆ.
ಕೋವಿಡ್ ೧೯ ಸಂದರ್ಭದಲ್ಲಿ ಪ್ರಯಾಣಿಕರ ಒತ್ತಡ ಕಡಮೆ ಮಾಡಲು ಕೋಚ್ ಗಳ ಕಡಿತ ಮಾಡಿದ್ದು, ಇನ್ನೂ ಹೆಚ್ಚಿಸಿಲ್ಲ.ರೀಜರ್ವೇಷನ್ ಸಹ ಸಮರ್ಪಕವಾಗಿ ಸಿಗುತ್ತಿಲ್ಲ.ಪ್ರಯಾಣಿಕರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.ಜನ ಓಡಾಡುವ ದಾರಿಯಲ್ಲೇ ಮಲಗಿ ಪ್ರಯಾಸದಲ್ಲಿ ಹೊರಟಿದ್ದಾರೆ.ಪ್ರತಿದಿನ ಬೀದರ, ಕಲ್ಬುರ್ಗಿ, ಯಾದಗಿರ ಮತ್ರು ರಾಯಚೂರನಿಂದ ಬೆಂಗಳೂರಿಗೆ ಕನಿಷ್ಟ ೮ ಸಾವಿರ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ ಎಂದು ಗಮನಕ್ಕೆ ತಂದಿದ್ದಾರೆ.
ಈ ಎರಡು ಹೊಸ ರೈಲುಗಳು ಯಾದಗಿರಿ, ರಾಯಚೂರ ಮೂಲಕ ಓಡಿಸಲು ಬಾಬುರಾವ್ ಕೋರಿದ್ದಾರೆ.