
ರಾಯಚೂರು, ಸೆ .೨- ಸೆಪ್ಟೆಂಬರ್ ೧ರಂದು ಮಧ್ಯಾಹ್ನ ೪ ಗಂಟೆಗೆ ರಾಯಚೂರುಗೆ ಆಗಮಿಸಿದ ೦೭೦೬೭-೬೮ ಮಂತ್ರಾಲಯ-ಮಚಲಿಪಟ್ಟಣ ರೈಲಿಗೆ ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಹಾಗೂ ಡಾ,ಶರವಣ್ ಕುಮಾರ್, ರೈಲ್ವೆ ಸೀನಿಯರ್ ಡಿವಿಜನಲ್ ಆಪರೇಟರ್ ಮ್ಯಾನೇಜರ್ ಗುಂತಕಲ್ ಇವರು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸುವ ಮೂಲಕ ಹಸಿರು ನಿಶಾನೆ ತೋರಿದರು.
ಈ ಟ್ರೈನ್ ಮುಚಲಿಪಟ್ಟಣದಿಂದ- ಮಂತ್ರಾಲಯ, ನಂತರ ಮಂತ್ರಾಲಯದಿಂದ ರಾಯಚೂರು ಹಿಂದಿರುಗಿ ವಯಾ ಗದ್ವಾಲ್, ಕರ್ನೂಲು, ಧೋನ್ ನಂದ್ಯಾಲ, ನರಸರಾವ್ ಪೇಟ್, ಗುಂಟೂರು ವಿಜಯವಾಡ ,ಗುಡಿವಾಡ ಮೂಲಕ ಮಚಲಿಪಟ್ಟಣಂ ಸೇರಲಿದೆ.
ಈ ಸಂದರ್ಭದಲ್ಲಿ ಕಮ್ಮವಾರಿ ಸಂಘದ ಅಧ್ಯಕ್ಷರು ಸದಸ್ಯರುಗಳು ಹರ್ಷ ವ್ಯಕ್ತಪಡಿಸಿ ಬಾಬುರಾವ್ ರೈಲ್ವೆ ಸದಸ್ಯರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಸನ್ಮಾನಿಸಿ ಸಿಹಿಯನ್ನು ಹಂಚಿದರು.
ಬಾಬುರಾವ್ ಮಾತನಾಡಿ ಈ ಒಂದು ಹೊಸ ರೈಲು ಸೌಲಭ್ಯದ ಕಾರಣಿಕರ್ತರಾದ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ ರವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ಮುಂದೆ ಇನ್ನು ಹೆಚ್ಚಿನ ಸೌಲಭ್ಯಗಳು ಈ ರೈಲ್ವೆ ನಿಲ್ದಾಣಕ್ಕೆ ದೊರಕಲಿವೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಅಶೋಕ್ ಕುಮಾರ್ ಮೀನಾ ಸ್ಟೇಷನ್ ಮ್ಯಾನೇಜರ್, ಎಸ್ ಕೆ ಸರ್ಕಾರ, ಟಿಐ ಸುನಿಲ್ ಕುಮಾರ್ ಸಿ ಜಿ ಎಸ್ ಆರ್, ಅಮರ್ನಾಥ್ , ಹೆಚ್ ಐ, ರಾಯಚೂರು ಕಮ್ಮವಾರಿ ಸಂಘದ ಅಧ್ಯಕ್ಷರಾದ ಬಿ.ಪ್ರಸಾದ್ ರಾವ್, ನೆಕ್ಕಂಟಿ ಶ್ರೀನಿವಾಸರಾವ್ ಮಾನ್ವಿ ಕಮ್ಮವಾರಿ ಸಂಘದ ಅಧ್ಯಕ್ಷರು, ಪಿ ಟಿ ಆನಂದ್ ರಾವ್,ಸಿ ಎಚ್ ಕೇಶವ ರಾವ್, ಸಿ ಎಚ್ ನಾಗೇಶ್ವರ ರಾವ್, ಎನ್ ಬದ್ರಿನಾರಾಯಣ, ಎನ್ ವಿಶ್ವೇಶ್ವರಾವ್, ಎಸ್ ವೆಂಕಟೇಶ, ಸೂರ್ಯದೇವರ ನಾಗೇಶ್ವರ, ಜಿ ಶ್ರೀನಿವಾಸ್, ಎನ್ ರಾಮು, ಟಿ.ಸೂರಿ, ಬಾಬು ಡಿ ಶೇಷು ಸತೀಶ್, ವೆಂಕಟೇಶರಾವ್ (ಕೊಂಡಯ್ಯ)ಎಂಬಿ ರಮೇಶ್ ಸದಸ್ಯರುಗಳು, ಪತ್ರಿಕಾ ಹಾಗೂ ಮಾಧ್ಯಮ ಮಿತ್ರರು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.