ಹೊಸ ಬೆಳವನೂರಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

ದಾವಣಗೆರೆ.ಮೇ.೨೫; ತಾಲ್ಲೂಕಿನ ಹೊಸ ಬೆಳವನೂರಿನಲ್ಲಿ ದಾವಣಗೆರೆ ತಾಲ್ಲೂಕು ಕ.ಸಾ.ಪ., ಬೆಳವನೂರಿನ ಸ್ತ್ರೀಶಕ್ತಿ ಸಂಘಗಳು ಹಾಗೂ ದಾವಣಗೆರೆಯ ಹಿರಿಯ ನಾಗರಿಕರ ಸಹಾಯವಾಣಿ ಸಹಯೋಗದಲ್ಲಿ “ಶಾಲಾ-ಕಾಲೇಜುಗಳ ಅಂಗಳದಲ್ಲಿ” ಸಾಹಿತ್ಯೋತ್ಸವದ ಅಂಗವಾಗಿ ಹೊಸ ಬೆಳವನೂರಿನ ಸರ್ಕಾರಿ ಕುವೆಂಪು ಮಾದರಿ ಶಾಲೆ ಆವರಣದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷರಾದ ಅಶು ಟಿ.ಎ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಮಹಾಂತೇಶ್ ದೀಪ ಬೆಳಗಿಸಿ ನೆರವೇರಿಸಿದರು.ತಾಲ್ಲೂಕು ಕ.ಸಾಪ. ನಿರ್ದೇಶಕ ಎಂ. ಷಡಕ್ಷರಪ್ಪ ಪ್ರಾಸ್ತವಿಕ ನುಡಿಗಳನ್ನಾಡಿದರು. ದಾವಣಗೆರೆಯ ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ರುದ್ರಮುನಿ ಹಿರೇಮಠರವರು “ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ” ವಿಷಯ ಆಧರಿಸಿ ಉಪನ್ಯಾಸ ನೀಡಿದರು. ಹಿರಿಯ ನಾಗರಿಕರ ಸಹಾಯವಾಣಿಯ ಸಂಯೋಜಕ ನವೀನ್ ಕುಮಾರ್ ಮಾತನಾಡಿ, ಹಿರಿಯ ನಾಗರಿಕರು ಮತ್ತು ಅಂಗವಿಕಲರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯ ಅಥಿತಿಗಳಾಗಿ ಪಿಡಿಓ ಕು.ರೇವತಿ, ತಾಲ್ಲೂಕು ಕ.ಸಾ.ಪ. ಅಧ್ಯಕ್ಷೆ ಸುಮತಿ ಜಯಪ್ಪ ಈ ಸಂದರ್ಭದಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ ಹೊಸ ಬೆಳವನೂರಿಗೆ ಸೇರಿದ ಸ್ತ್ರೀಶಕ್ತಿ ಸಂಘಗಳ ಸದಸ್ಯರುಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕ.ಸಾಪ. ನಿರ್ದೇಶಕಿ ಕಲ್ಪನರವರು ಸ್ವಾಗತ ಮತ್ತು ವಂದನಾರ್ಪಣೆ ನೆರವೇರಿಸಿದರು.