
ಕೋಲಾರ,ನ,೧೩:ಕೋಲಾರ, ಮಾಲೂರು, ಬಂಗಾರಪೇಟೆ ತಾಲ್ಲೂಕಿನ ಜನತೆಗೆ ಕುಡಿಯುವ ನೀರಿನ ಸಲುವಾಗಿ ಯರ್‌ಗೋಳ್ ಡ್ಯಾಮ್ ನಿರ್ಮಿಸಿ ಮುಖ್ಯ ಮಂತ್ರಿಗಳಿಂದ ಲೋಕಾರ್ಪಣೆ ಮಾಡಲಾಗಿದೆ. ಈ ಯೋಜನೆ ಪೂರ್ಣಗೊಳಿಸುವಲ್ಲಿ ಕಾಂಗ್ರೆಸ್, ಜೆ.ಡಿ.ಎಸ್. ಮತ್ತು ಬಿಜೆಪಿ ಪಕ್ಷಗಳ ಆಡಳಿತದ ಕೊಡುಗೆ ಇದೆ. ಯರ್‌ಗೋಳ್ ಯೋಜನೆಯ ಯಶಸ್ವಿಯಾಗ ಬೇಕಾದರೆ ಮಾರ್ಕೆಂಡಯ್ಯ ಕೆರೆ ಕೋಡಿ ಹರಿದರೆ ಮಾತ್ರ ಯರ್‌ಗೋಳ್ ಮೂಲಕ ತಮಿಳು ನಾಡಿಗೆ ನೀರು ಹರಿಯುತ್ತಿತ್ತು. ಮಾರ್ಕೆಂಡಯ್ಯ ಕರೆ ತುಂಭಲು ಮಳೆಯ ನೀರೇ ಮೂಲವಾಗಿದೆ ಎಂಬುವುದನ್ನು ಅಲ್ಲಗೆಳೆಯುವಂತಿಲ್ಲ.
ಕೋಲಾರ ಜಿಲ್ಲೆಯಲ್ಲಿ ಬರಗಾಲಕ್ಕೆ ತುತ್ತಾಗುತ್ತಿರುವುದು ಹೊಸದೆನಲ್ಲ. ಹಲವಾರು ವರ್ಷಗಳು ಮಳೆ ಬೆಳೆಗಳಿಲ್ಲದೆ ಕೃಷಿಗೆ ಹಾಗೂ ಕುಡಿಯಲು ಅಂತರ್ಜಲ ಮೊರೆ ಹೋಗಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆದಿರುವುದು ಕೋಲಾರ ಜಿಲ್ಲೆಯಾಗಿದೆ. ಸುಮಾರು ೧೫೦೦ ಅಡಿಗೂ ಹೆಚ್ಚಿನ ಪಾತಳದಲ್ಲಿನ ಅಂತರ್ಜಲದ ಪ್ಲೋರೈಡ್ ನೀರು ಕುಡಿಯ ಬೇಕಾದ ದುಃಸ್ಥಿತಿ ಉಂಟಾಗಿತ್ತು ಎಂಬುವುದು ಜನಜನಿತವಾಗಿದೆ.
ಜಿಲ್ಲೆಯನ್ನು ಬರಗಾಲದಿಂದ ಮುಕ್ತಗೊಳಿಸಿ ಅಂತರ್ಜಲ ಅಭಿವೃದ್ದಿ ಪಡೆಸಲು ಕೆ.ಸಿ.ವ್ಯಾಲಿ ಯೋಜನೆ ಮೂಲಕ ಜಿಲ್ಲೆಯಲ್ಲಿ ಬತ್ತಿ ಹೋಗಿರುವ ಕೆರೆಗಳಿಗೆ ಕೋರಮಂಗಲ ಮತ್ತು ಚೆಲ್ಲಘಟ್ಟ ಕೆರೆಗಳಿಂದ ಕಲ್ಮಶ ನೀರು ತಮಿಳುನಾಡಿಗೆ ಹರಿದು ಹೋಗುತ್ತಿರುವುದನ್ನು ತಡೆದು ಎರಡು ಭಾರಿ ಸಂಸ್ಕರಿಸಿ ಅಂತರ್ಜಲ ಅಭಿವೃದ್ದಿ ಪಡೆಸಿ ಕೋಲಾರ ಜಿಲ್ಲೆಗೆ ಹರಿಸಲು ವಿಶೇಷ ಯೋಜನೆಯನ್ನು ರೂಪಿಸಿ ಅನುಷ್ಠನಕ್ಕೆ ತರಲಾಗಿದೆ. ಇದರಿಂದ ಜಿಲ್ಲೆಯ ೧೩೪ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗಿದೆ. ಇದರಿಂದ ಅಂತರ್ಜಲ ಅಭಿವೃದ್ದಿ ಗೊಂಡಿದೆ ಎಂಬುವುದರಲ್ಲಿ ಎರಡನೇ ಮಾತಿಲ್ಲ.
ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಅಭಿವೃದ್ದಿ ಗೊಂಡು ಕೊಳವೆ ಭಾವಿಗಳಲ್ಲಿ ೩೦೦-೪೦೦ ಅಡಿಗಳಿಗೆ ನೀರು ಸಿಗುವಂತಾಗಿದೆ. ಇದರಿಂದ ಕೃಷಿ ಮತ್ತು ತೋಟಗಾರಿಕೆಯಲ್ಲಿ ರೈತರಿಗೆ ಕೆ.ಸಿ.ವ್ಯಾಲಿ ವರದಾನವಾಗಿದ್ದು ಬೆಳೆಗಳು ಉತ್ತಮ ರೀತಿಯಲ್ಲಿ ಬೆಳೆಯಲು ಅನುವುಂಟಾಗಿದೆ ಕೆ.ಸಿ.ವ್ಯಾಲಿಯಿಂದ ಜಿಲ್ಲೆಯಲ್ಲಿ ಬಹುತೇಕ ನೀರಿನ ಸಮಸ್ಯೆ ನೀಗಿದೆ ಅದರೆ ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಇನ್ನು ಸಾಧ್ಯವಾಗಿಲ್ಲ.
ಅಪರೊಪಕ್ಕೆ ೭-೮ ವರ್ಷಗಳಿಗೆ ಒಮ್ಮೆ ವಾಡಿಕೆ ಮಳೆಗಿಂತ ಹೆಚ್ಚಾಗಿ ಮಳೆ ಬಿದ್ದರೂ ಸಹ ನಮ್ಮ ಜಿಲ್ಲೆಯಲ್ಲಿ ನೀರನ್ನು ಶೇಖರಿಸಲು ಪೂರಕವಾದ ಡ್ಯಾಮ್‌ಗಳಿಲ್ಲ. ಇಂಥ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನೀರನ್ನು ಶೇಖರಿಸಲು ಡ್ಯಾಮ್‌ಗಳ ಅಗತ್ಯವಿದೆ. ಡ್ಯಾಮ್‌ಗಳ ಕೊರತೆಗಳಿಂದ ವ್ಯರ್ಥವಾಗಿ ಕೆರೆ ಕೋಡಿ ಹರಿಯುವ ನೀರು ತಮಿಳು ನಾಡಿಗೆ ಹರಿದು ಹೋಗುತ್ತಿತ್ತು. ಅದೇ ರೀತಿ ಮಾರ್ಕೆಂಡಯ್ಯ ಕೋಡಿ ನೀರು ಯರ್‌ಗೋಳ್ ಮೂಲಕ ತಮಿಳು ನಾಡಿಗೆ ಹರಿದು ವ್ಯರ್ಥವಾಗುತ್ತಿದ್ದ ನೀರನ್ನು ಶೇಖರಿಸಲು ಡ್ಯಾಮ್ ನಿರ್ಮಿಸಿರುವುದು ಸ್ವಾಗತಾರ್ಹವಾಗಿದೆ.
ಅದರೆ ನಮ್ಮ ಜಿಲ್ಲೆಯಲ್ಲಿ ಪ್ರತಿವರ್ಷ ವಾಡಿಕೆ ಮಳೆಯು ನಿರೀಕ್ಷೆಯಂತೆ ಅಗುತ್ತಿಲ್ಲ ವಾಯುಭಾರ ಕುಸಿತದಿಂದ ಬೀಳುವ ಮಳೆ ವರದಾನವಾಗಿದ್ದು ಹಲವಾರು ವರ್ಷಗಳು ವಾಯುಬಾರದಿಂದ ಬೀಳುತ್ತಿದ್ದ ಮಳೆಯೇ ರೈತರ ಬೆಳೆಗಳಿಗೆ ಜೀವ ತುಂಬಿದೆ. ವಾಡಿಕೆ ಮಳೆಗಳು ನಮ್ಮ ಜಿಲ್ಲೆಯಲ್ಲಿ ಪ್ರತಿ ವರ್ಷ ಬೀಳುತ್ತೆ ಎಂಬುವುದು ಗ್ಯಾರೆಂಟಿ ಇಲ್ಲ. ಬಹುತೇಕ ಬರಪೀಡಿತಕ್ಕೆ ಸಿಲುಕಿ ರೈತರು ತಮ್ಮ ಬೆಳೆಗಳನ್ನು ಕಳೆದು ಕೊಂಡು ಭಾರಿನಷ್ಟಕ್ಕೆ ತುತ್ತಾಗಿರುವುದು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.
ಈ ವರ್ಷ ಮಳೆಯಿಲ್ಲದೆ ಕೋಲಾರ ಜಿಲ್ಲೆಯ ೬ ತಾಲ್ಲೂಕುಗಳು ಬರಪೀಡಿತಕ್ಕೆ ಗುರಿಯಾಗಿದೆ ಕೆ.ಸಿ.ವ್ಯಾಲಿ ನೀರಿನ ಸಂಪನ್ಮೂಲ ಹೊಂದಿರುವ ಕೆರೆಗಳನ್ನು ಹೊರತು ಪಡೆಸಿ ಬಹುತೇಕ ಕೆರೆಗಳು ಬತ್ತಿ ಹೋಗಿದೆ ವಾಸ್ತು ಸ್ಥಿತಿ ಹೀಗಿರುವಾಗ ಯರ್‌ಗೋಳ್‌ಗೆ ಎಲ್ಲಿಂದ ನೀರು ಹರಿದು ಬರುತ್ತಿದೆ? ಮಾರ್ಕೆಂಡಯ್ಯ ಕೆರೆಗೆ ಹರಿದು ಬರುತ್ತಿರುವ ನೀರು ಯಾವೂದು? ಕೋಡಿ ಹರಿಯುತ್ತಿರುವ ನೀರು ಯಾವೂದು? ಎಂಬುವುದು ಸಾರ್ವಜನಿಕರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕುಡಿಯುವ ನೀರಿಗಾಗಿ ಯರ್‌ಗೋಳ್ ಯೋಜನೆಯನ್ನು ರೂಪಿಸಲಾಗಿತ್ತು. ಅದರೆ ಇಂದು ಮಾರ್ಕೆಂಡಯ್ಯ ಕೆರೆಗೆ ಕೆ.ಸಿ.ವ್ಯಾಲಿ ನೀರನ್ನು ತುಂಬಿಸಿ ಕೋಡಿ ಹರಿಯುವಂತೆ ಮಾಡಿ ಯರ್‌ಗೋಳ್ ಡ್ಯಾಮ್‌ಗೆ ತುಂಭಿಸಲಾಗಿದೆ ಎಂಬ ಅರೋಪಗಳು ಕೇಳಿ ಬರುತ್ತಿದೆ. ನಮಗೆ ಕೆ.ಸಿ.ವ್ಯಾಲಿ ನೀರು ಕೊಡಲು ಯರ್‌ಗೋಳ್ ಯೋಜನೆಗೆ ನೊರಾರು ಕೋಟಿ ವೆಚ್ಚ ಮಾಡುವಂತ ಅವಶ್ಯಕತೆ ಇರಲಿಲ್ಲ. ಕೋಲಾರದಲ್ಲಿನ ಕೆರೆಗಳಲ್ಲಿಯೇ ಕೆ.ಸಿ.ವ್ಯಾಲಿ ನೀರು ತುಂಬಿರುವಾಗ ಬಂಗಾರಪೇಟೆಯಿಂದ ತರುವಂತ ಔಚಿತ್ಯ ಏನಿತ್ತು? ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅದ್ದರಿಂದಲೇ ಯರ್‌ಗೋಳ್ ನೀರನ್ನು ಪ್ರಯೋಗಿಕವಾಗಿ ನಗರಸಭೆಯ ನಲ್ಲಿಗಳ ಮೂಲಕ ಹರಿಸಲಾಗುವುದು ಇದನ್ನು ಯಾರೂ ಸಹ ಕುಡಿಯಲು ಬಳಿಸ ಬೇಡಿ, ಮನೆ ಬಳಕೆ ಮಾತ್ರ ಬಳಿಸಿ ಎಂದು ಜಿಲ್ಲಾಡಳಿತ ಅದೇಶ ನೀಡಿದೆ. ನೀರನ್ನು ೩ನೇ ಹಂತದಲ್ಲಿ ಸಂಸ್ಕರಿಸ ಬೇಕೆಂದು ಹೇಳಲಾಗಿದೆ. ಮಳೆ ನೀರು ಅಗಿದ್ದರೆ ಸಾರ್ವಜನಿಕರು ಅತಂಕ ಪಡುವಂತ ಪರಿಸ್ಥಿತಿ ಇರಲಿಲ್ಲ ಅದರೆ ಕೊಳಚೆ ನೀರು ಸಂಸ್ಕರಿಸಿ ಹರಿಸುವ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ದುರ್‍ಬಳಿಸಿರುವುದು ಹೊಸ ಖಾಲಿ ಬಾಟಲಿಗೆ ಹಳೆ ಮದ್ಯವನ್ನು ತುಂಬಿಸಿ ನೀಡಿದಂತಾಗಿದೆ ಇದೇ ನಮ್ಮ ಯರ್‌ಗೋಳ್ ಯೋಜನೆಯ ಗೋಳು ಕಥೆಯಾಗಿದೆ !