ಹೊಸ ಬದುಕಿಗೆ ಪ್ರಧಾನಿ ಭರವಸೆ ತೋರಣ

ನವದೆಹಲಿ, ಡಿ. ೩೧- ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ದೇಶದಲ್ಲಿ ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ವರ್ಷ ಮಹಾಮಾರಿ ಸೋಂಕಿನ ವಿರುದ್ಧ ಹೋರಾಟ ಮಾಡುವಲ್ಲಿ ಪ್ರದರ್ಶನ ಮಾಡಿರುವ ಐಕ್ಯತೆಯನ್ನು ಲಸಿಕೆ ಹಾಕುವ ಆಂದೋಲನ ಸಂದರ್ಭದಲ್ಲಿ ಜನತೆ ಪ್ರದರ್ಶಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಕೊರೋನಾ ವೈರಾಣು ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಅವರು, ಬೃಹತ್ ಜನಸಂಖ್ಯೆಯುಳ್ಳ ಭಾರತದಂತಹ ರಾಷ್ಟ್ರ ದಲ್ಲಿ ಸುಮಾರು ಒಂದು ಕೋಟಿ ಜನರು ಕೊರೋನಾ ಮಹಾಮಾರಿ ವೈರಾಣು ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಹಾಗೂ ದೇಶದಲ್ಲಿ ದಿನೇದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಗುಜರಾತ್ ರಾಜ್ಯದ ರಾಜಕೋಟ್ ನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ. . ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇಡೀ ಜಗತ್ತಿನ ಆರೋಗ್ಯ ಕ್ಷೇತ್ರದಲ್ಲಿ ಭಾರತ ನರಗಳ ಕೇಂದ್ರವಾಗಿ ಹೊರಹೊಮ್ಮಿದೆ. ಆರೋಗ್ಯದ ಭವಿಷ್ಯ ಹಾಗೂ ಭವಿಷ್ಯದ ಆರೋಗ್ಯ ವಿಚಾರದಲ್ಲಿ ಭಾರತ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಲದೆ ಎಂದು ಹೇಳಿದರು.

ಅಗತ್ಯವೆನಿಸಿದ ಸಂದರ್ಭದಲ್ಲೆಲ್ಲಾ ನಮ್ಮ ದೇಶ ನೂತನ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅನ್ವೇಷಣೆ ಮಾಡುವುದು ಮತ್ತು ವಿಸ್ತರಣೆ ಮಾಡುವ ವಿಚಾರದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ ಎಂದ ಅವರು, ಮಾನವೀಯತೆ ಬಗ್ಗೆಯೇ ನಮ್ಮ ವಿಶೇಷ ಕಾಳಜಿ ಮತ್ತು ಒತ್ತು. ಜಗತ್ತಿನ ಆರೋಗ್ಯ ಕ್ಷೇತ್ರದಲ್ಲಿ ಭಾರತ ನರಗಳ ಕೇಂದ್ರವಾಗಿ ಈಗಾಗಲೇ ಹೊರಹೊಮ್ಮಿದೆ ಎಂದರು.

೨೦ ೨೦ರಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳಿಗೆ ವಿದಾಯ ಹೇಳೋಣ ಬರುವ ವರ್ಷವನ್ನು ಹೊಸ ಭರವಸೆಯೊಂದಿಗೆ ಸ್ವಾಗತಿಸೋಣ. ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈ ವರ್ಷ ವಿಶೇಷ ಒತ್ತು ನೀಡಲಾಗಿದೆ ಎಂದರು.

ನಮ್ಮನ್ನು ಸುರಕ್ಷಿತವಾಗಿ ಕಾಪಾಡಿದ ನಮ್ಮ ಜೀವಗಳನ್ನು ರಕ್ಷಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ೨೦೨೦ರ ಕೊನೆ ದಿನವನ್ನು ಸಮರ್ಪಣೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಜಕೋಟ್ ನಲ್ಲಿ ೨೦೧ ಎಕರೆ ಪ್ರದೇಶದಲ್ಲಿ ೧ ಸಾವಿರದ ೧೯೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಈ ಸಂಸ್ಥೆಯಿಂದ ರಾಜ್ಯದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ದೊರೆಯುವುದಲ್ಲದೆ ಹೆಚ್ಚಿನ ಉದ್ಯೋಗ ಮತ್ತು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ಹೇಳಿದರು.

ದವಾಯಿ ಬಿ ಹೌ ರ್. ಕಡಾ ಯ ಬಿ

ನಾನು ಈ ಹಿಂದೆ ದವಾಯಿ ನಹಿ, ತೋಹ ದಿ ಲೈ ನಹಿ ಎಂದು ಹೇಳಿದ್ದೆ. ಆದರೆ ಈಗ ನಾನು ದವಾಯಿ ಬೀ. ಹೌ ರ ಕಡಾಯಿ ಭೀ ಎಂದು ಹೇಳುತ್ತಿದ್ದೇನೆ. ಮಹಾಮಾರಿ ಸೋಂಕಿಗೆ ಔಷಧವು ಇದೆ ಈ ಬಗ್ಗೆ ಎಚ್ಚರಿಕೆಯೂ ಇದೆ ಎಂದು ತಮ್ಮದೇ ದಾಟಿಯಲ್ಲಿ ತಿಳಿಸಿದರು.