ಹೊಸ ಫೋಟೋ ಶೂಟ್‌ನಲ್ಲಿ ತಮನ್ನಾ ಮಿಂಚಿಂಗ್

ಹೈದರಾಬಾದ್, ಜೂ.೨೮- ತಮನ್ನಾ ಭಾಟಿಯಾ ಈಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರ ಭಾರತದವಳಾದರೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ತಮನ್ನಾಗೆ ಬಾಲಿವುಡ್‌ನಲ್ಲೂ ಸಖತ್ ಡಿಮ್ಯಾಂಡ್ ಇದೆ.
ಅಗ್ಗಾಗ್ಗೆ ಬೋಲ್ಡ್ ಲುಕ್‌ನಲ್ಲಿ ದರ್ಶನ್ ನೀಡುವ ತಮನ್ನಾ ಈಗ ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಿಲ್ಕಿ ಬ್ಯೂಟಿ, ಇತ್ತೀಚೆಗೆ ಲಸ್ಟ್ ಸ್ಟೋರೀಸ್ ೨ ಸಿನಿಮಾದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು.
ಜೈಲರ್ ಚಿತ್ರದ ಪ್ರಚಾರದ ವೇಳೆ ಮಾಡಿದ ಫೋಟೊಶೂಟ್ ಚಿತ್ರಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವು ಆಗಸ್ಟ್ ೧೦ ರಂದು ತೆರೆಗೆ ಬರುತ್ತಿದೆ.
ಜೈಲರ್ ಚಿತ್ರದ ಕಾವಲಯ್ಯ ಹಾಡು ಬಹಳ ಪ್ರಸಿದ್ಧವಾಗಿದೆ. ತಮನ್ನಾ ಎಲ್ಲಿಗೆ ಹೋದರೂ ಈ ಹಾಡಿಗೆ ಡ್ಯಾನ್ಸ್ ಮಾಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸುತ್ತಾರೆ.
ಕೆಲವರು ತಮನ್ನಾ ಶೇರ್ ಮಾಡಿರುವ ಫೋಟೋಗಳನ್ನು ಮೆಚ್ಚಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ನೀವು ಈಗ ಬದಲಾಗಿದ್ದೀರಿ ಎಂದಿದ್ದಾರೆ. ಅಷ್ಟೊಂದು ಹಾಟ್ ಲುಕ್ ಬೇಕಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ತಮನ್ನಾ ಫೋಟೋಗಳಿಗೆ ಪ್ರಿಯಕರ ವಿಜಯ್ ವರ್ಮಾ ಕೂಡಾ ಕಾಮೆಂಟ್ ಮಾಡಿದ್ದು, ಮಾನ್ಸೂನ್‌ನಲ್ಲಿ ಹೀಟ್ ವೇವ್ ಎಂದು ಪ್ರೇಯಸಿಯ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಗೆಳೆಯ ವಿಜಯ್ ವರ್ಮಾ ಜೊತೆ ಮಿಲ್ಕಿ ಬ್ಯೂಟಿ ಸುದ್ದಿಯಲ್ಲಿದ್ದಾಳೆ. ಕೊನೆಗೂ ಇಬ್ಬರೂ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ತಮನ್ನಾ ಪ್ರಸ್ತುತ ಭೋಲಾ ಶಂಕರ್, ಅರಮನೆ ೪, ಬಾಂದ್ರಾ ಮತ್ತು ಇನ್ನೊಂದು ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಲಸ್ಟ್ ಸ್ಟೋರೀಸ್ ೨ ಚಿತ್ರದಲ್ಲಿ ತಮನ್ನಾ, ಪ್ರಿಯಕರನೊಂದಿಗೆ ಲಿಪ್ ಕಿಸ್ ಮಾಡಿ ತಮ್ಮ ಇಷ್ಟು ವರ್ಷಗಳ ನೋ ಕಿಸ್ಸಿಂಗ್ ರೂಲ್ಸ್ ಬ್ರೇಕ್ ಮಾಡಿದ್ದರು.