ಹೊಸ ಪ್ರೇಮಿ ಜೊತೆ ಸೇರಿ ಹಳೆ ಪ್ರಿಯಕರನ ಕೊಲೆ

ಬೆಂಗಳೂರು,ಸೆ.೨೪- ಹೊಸ ಪ್ರೇಮಿಯ ಅಕರ್ಷಣೆಗೊಳಗಾಗಿ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಿಯಕರನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಪ್ರಿಯತಮೆ ಸೇರಿ ನಾಲ್ವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೆ. ೫ರಂದು ಮಾದಾವರ ನವಿಲೇ ಲೇಔಟ್??ನ ನಿರ್ಜನ ಪ್ರದೇಶದಲ್ಲಿ ಕಿರಣ್ ಕುಮಾರ್ ನ ಕುತ್ತಿಗೆ, ಎದೆಗೆ ಚಾಕುವಿನಿಂದ ಚುಚ್ಚಿ ಗಂಭೀರ ಹಲ್ಲೆ ಮಾಡಲಾಗಿತ್ತು.
ಗಾಯಗೊಂಡು ಅಸ್ವಸ್ಥನಾಗಿದ್ದ ಕಿರಣ್ ನನ್ನು ನೋಡಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮಾದನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸುಪಾರಿ ಕೊಟ್ಟು ಪ್ರಿಯತಮೆಯೇ ಕೊಲೆ ಮಾಡಿಸಿರುವುದು ಪತ್ತೆಯಾಗಿದೆ.
ಪ್ರೀತಿ ಮಧ್ಯೆ ಡೇವಿಡ್:
ಬಂಧಿತ ಯುವತಿ ಶ್ವೇತಾ ಹಾಗೂ ಕೊಲೆಯಾದ ಕಿರಣ್ ಕುಮಾರ್ ಕಳೆದ ೫ ವರ್ಷದಿಂದ ಪ್ರೀತಿಸುತ್ತಿದ್ದರು. ಈ ನಡುವೆ ಇತ್ತೀಚೆಗೆ ಡೇವಿಡ್ ಎಂಬಾತ ಶ್ವೇತಾಗೆ ಪರಿಚಯವಾಗಿದ್ದು, ದಿನಕಳೆದಂತೆ ಇಬ್ಬರ ನಡುವೆ ಸಲುಗೆ ಬೆಳೆದಿದೆ.
ಡೇವಿಡ್ ಮೋಹಕ್ಕೆ ಸಿಲುಕಿದ ಶ್ವೇತಾಗೆ ಕಿರಣ್ ಕುಮಾರ್ ಮುಳುವಾಗಿ ಜಗಳ ಮಾಡುತ್ತಿದ್ದು ಆಕ್ರೋಶಗೊಂಡ ಶ್ವೇತಾ ಸುಪಾರಿ ಕೊಟ್ಟು ಕಿರಣ್ ಕೊಲೆ ಮಾಡಲು ಡೇವಿಡ್ ಜೊತೆ ಸೇರಿ ಯೋಜನೆ ರೂಪಿಸಿದ್ದಳು.
ಕಿರಣ್ ಕೊಲೆಗೆ ಸ್ಕೆಚ್?:
ಶ್ವೇತಾ ಮಾತಿನಂತೆ ಕಿರಣ್ ಕುಮಾರ್ ಕೊಲೆಗೆ ಸ್ಕೆಚ್? ಹಾಕಿದ ಡೇವಿಡ್ ತನ್ನ ಜೊತೆ ಶ್ರೀಕಾಂತ್ ಮತ್ತು ದಿನೇಶ್ ನನ್ನು ಸೇರಿಸಿಕೊಂಡು ಶ್ರೀಕಾಂತ್ ಮತ್ತು ದಿನೇಶ್? ಗೆ ಕಿರಣ್ ಕೊಲೆ ಮಾಡಲು ೧ ಲಕ್ಷ ರೂಗೆ ಡೀಲ್ ಮಾಡಿದ ಡೇವಿಡ್, ೧೦ ಸಾವಿರ ರೂ.ಗಳನ್ನು ಮುಂಗಡವಾಗಿ ನೀಡಿದ್ದ.
ಕಿರಣ್ ಕುಮಾರ್ ಚಲನವಲನದ ಬಗ್ಗೆ ಅರಿತಿದ್ದ ಶ್ವೇತಾ ಆರೋಪಿಗಳಿಗೆ ಎಲ್ಲ ಮಾಹಿತಿ ನೀಡಿದ್ದಳು. ಆಕೆಯ ಮಾಹಿತಿ ಮೇರೆಗೆ ಡೇವಿಡ್ ಸೂಚನೆಯಂತೆ ಶ್ರೀಕಾಂತ್ ಮತ್ತು ದಿನೇಶ್?? ಕಿರಣ್ ಮೇಲೆ ದಾಳಿಗೆ ಸಂಚು ಮಾಡಿದ್ದರು.
ಅಸಲಿಯತ್ತು ಪತ್ತೆ:
ಅದರಂತೆ ಮಾದಾವರ ನವಿಲೇ ಲೇಔಟ್??ನ ನಿರ್ಜನ ಪ್ರದೇಶದಲ್ಲಿ ಸೆ.೫ರಂದು ಕಿರಣ್ ಕುಮಾರ್ ಹೋಗುತ್ತಿದ್ದಾಗ ದಾಳಿ ನಡೆಸಿ ಗಂಭೀರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಕಿರಣ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಇನ್ಸ್?ಪೆಕ್ಟರ್?? ಮಂಜುನಾಥ್ ನೇತೃತ್ವದ ತಂಡವು ಸಿಸಿಟಿವಿಯಲ್ಲಿ ಬೈಕ್ ಚಲನವಲನ ಆಧರಿಸಿ ತನಿಖೆ ನಡೆಸಿತ್ತು.
ಬಳಿಕ ಯುವತಿ ಶ್ವೇತಾಳನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಅಸಲಿಯತ್ತು ಹೊರ ಬಿದ್ದಿದೆ. ಪ್ರಕರಣ ಸಂಬಂಧ ನಾಲ್ವರನ್ನೂ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್, ಚಾಕು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.