ಹೊಸ ಪ್ರಯತ್ನಕ್ಕೆ ಕೈಹಾಕಿದ ರಚಿತಾ

ಕನ್ನಡ ಚಿತ್ರರಂಗದಲ್ಲಿ ನಟಿ ರಚಿತಾರಾಮ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.ಅದಕ್ಕೆ ಕಾರಣವಿಷ್ಟೇ..ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಎಲ್ಲವೂ ನಾಯಕಿ ಪ್ರಧಾನ ಚಿತ್ರಗಳು ಎನ್ನುವ ಖುಷಿ ಮತ್ತೊಂದೆಡೆ.
ನಟಿಸುತ್ತಿರುವ ಎಲ್ಲಾ ಚಿತ್ರಗಳಲ್ಲಿ ಒಂದಕ್ಕಿಂತ ಒಂದು ಕಥೆ ವಿಭಿನ್ನವಾಗಿವೆ. ಎಲ್ಲರೂ ಹೊಸ ನಿರ್ದೇಶಕರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಪರಸ್ಪರ ಪರಿಚಯ ಮಾಡಿಸುವುದೂ ಕೂಡ ಅವರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ರಚಿತಾ ತಾವು ನಟಿಸುತ್ತಿರುವ ನಿರ್ದೇಶಕರನ್ನು ಒಂದೆಡೆ ಸೇರಿಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಟಿಸುತ್ತಿರುವ ಚಿತ್ರಗಳ ಚಿತ್ರೀಕರಣಕ್ಕೆ ತೊಂದರೆಯಾಗಬಾರದು ಎನ್ನುವ ಉದ್ದೇಶ ಅವರದು.
ಎಂಟರಿಂದ ಒಂಭತ್ತು ಮಂದಿ ನಿರ್ದೇಶಕರು ಒಬ್ಬರ ಕಥೆಗಳನ್ನು ಮತ್ತೊಬ್ಬರು ಪ್ರೇಕ್ಷಕರಾಗಿ ಕೇಳಿದ್ದಾರೆ.ಸಂದೇಹವಿದ್ದ ಪ್ರಶ್ನೆಗಳಿಗೆ ಅವರೇ ಉತ್ತರ ಬಯಸಿದ್ದಾರೆ. ಹೀಗಾಗಿ ಅವರೆಲ್ಲರ ಸಂಭಾಷಣೆಯನ್ನು ನಾನು ಒಂದು ಮೂಲೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದೆ ಎಂದು ಮಾಹಿತಿ ಹಂಚಿಕೊಂಡರು ನಟಿ ರಚಿತಾ ರಾಮ್.
ಎಲ್ಲರೂ ಕಥೆಯ ಬಗ್ಗೆ ಚರ್ಚೆ ನಡೆಸಿದ್ದ ನಂತರ ಹೇಳಿದ್ದೂ ಒಂದೇ ಮಾತು.ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೀರಾ. ರಾಜ್ಯದ ಜನತೆ ವಿಭಿನ್ನ ಪಾತ್ರಗಳಲ್ಲಿ ನಿಮ್ಮನ್ನು ನೋಡುವುದೇ ಖುಷಿಯ ಸಂಗತಿ ಎಂದರು. ಇದನ್ನು ಕೇಳಿ ಮತ್ತಷ್ಟು ಖುಷಿ ಹೆಚ್ಚಾಯಿತು ಎಂದರು.
ಕಥೆಗಳನ್ನು ಕೇಳಿದ ನಂತರ ಎಲ್ಲರದೂ ಒಂದೇ ಮಾತು ನಿಮ್ಮ ಚಿತ್ರದ ಚಿತ್ರೀಕರಣವನ್ನು ಸ್ವಲ್ಪ ಮುಂದಕ್ಕೆ ಹಾಕಿಕೊಳ್ಳಿ ಎಂದು ಅವರವರೇ ಮಾತನಾಡಿಕೊಳ್ಳುತ್ತಿದ್ದರು.ಹೀಗಾಗಿ ಚಿತ್ರಗಳಿಗೆ ದಿನಾಂಕ ಹೊಂದಾಣಿಕೆ ಮಾಡುವ ಕಷ್ಟ ತಪ್ಪಿದೆ.ದಿನಾಂಕ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಇದಕ್ಕಿಂತ ಖುಷಿ ಇನ್ನೇನು ಬೇಕು. ಜೊತೆಗೆ ನಿರ್ದೇಶಕರು ತಮ್ಮ ಚಿತ್ರಗಳ ಕಥೆಯನ್ನು ಮತ್ತಷ್ಟು ಇಂಪ್ರೂ ಮಾಡಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಿದೆ.ಹೊಸ ನಿರ್ದೇಶಕರನ್ನು ಒಟ್ಟಿಗೆ ಸೇರಿಸಿ ಚರ್ಚೆ ಮಾಡುವುದು ಸವಾಲಿನ ಕೆಲಸ.ಅಂತಹ ಕೆಲಸ ಮಾಡಿದ್ದೇನೆ ಎಂದರು ರಚಿತಾ ರಾಮ್.


ನನಗೆ ಪರ್ಸೆಂಟೇಜ್ ಬೇಡ
ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಪಕರು ನಿಮಗೆ ಪರ್ಸೆಂಟೇಜಾ ಬೇಕಾ ಎಂದು ಕೇಳಿದ್ದರು.ನಾನು ಮಾಡಿದ ಚಿತ್ರಕ್ಕೆ ಸಂಭಾವನೆ ಕೊಡಿ ನನಗೆ ಯಾವುದೇ ಪರ್ಸೆಂಟೇಜ್ ಬೇಡ. ಚಿತ್ರದಿಂದ ಬಂದ ಲಾಭವನ್ನೆಲ್ಲಾ ನೀವೇ ತೆಗೆದುಕೊಳ್ಳಿ, ಇನ್ನೂ ಒಂದಷ್ಟು ಸಿನಿಮಾ ಮಾಡಿ ಎಂದಿದ್ದೇನೆ ಎಂದರು ರಚಿತಾ.


ಗ್ರೂಪ್ ರಚನೆ
ಹೊಸ ನಿರ್ದೇಕರಾಗಿರುವ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ಯಾರಿಗೂ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ವಾಟ್ಸ್‍ಅಪ್ ಗ್ರೂಪ್ ರಚನೆ ಮಾಡಲಾಗಿದೆ. ಗ್ರೂಪ್‍ನಲ್ಲಿ ನಿರ್ದೇಶಕರು ದಿನಾಂಕದ ಬಗ್ಗೆ ಚರ್ಚೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಯಾವುದೇ ಸಮಸ್ಯೆಯಾಗುವದಿಲ್ಲ.