ಹೊಸ ಪ್ರತಿಮೆಗಾಗಿ ಹಳೆ ಪ್ರತಿಮೆ ತೆರವು

ಮುದ್ದೇಬಿಹಾಳ: ಜ.3:ಪಟ್ಟಣದಲ್ಲಿ ಕಳೇದ 25ವರ್ಷಗಳ ಹಿಂದೆ ಅತಿ ಚಿಕ್ಕದಾಗಿದ್ದ ಸಂವಿದಾನ ಶಿಲ್ಪಿ ಡಾ, ಬಿ ಆರ್ ಅಂಬೇಡ್ಕರವರ ವೃತ್ತದಲ್ಲಿದ್ದ ಮೂರ್ತಿಯನ್ನು ಹೊಸದಾಗಿ ನಿರ್ಮಿಸಲು ಉದ್ದೇಶದಿಂದ ಸೋಮವಾರ ಸಂಜೆ ಎಲ್ಲ ದಲಿತ ಹಾಗೂ ಪ್ರಗತಿಪರ ಸಂಘಟನೆ ಮುಖಂಡರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.

ಈ ವೇಳೆ ದಲಿತ ಮುಖಂಡ ಹರೀಷ ನಾಟಿಕಾರ ಅವರು ಮಾತನಾಡಿ ಕಳೇದ 25ವರ್ಷಗಳಿಂದ ಪಟ್ಟಣದ ಹೃದಯಭಾಗದಲ್ಲಿ ಸಂವಿದಾನ ಶಿಲ್ಪಿ ಡಾ, ಬಿ ಆರ್ ಅಂಬೇಡ್ಕರವರ ಮೂರ್ತಿಯನ್ನು ಅಂದಿನ ಕಾಲಕ್ಕೆ ತಕ್ಕಂಗತೆ ಕಡಿಮೆ ಖರ್ಚಿನಲ್ಲಿ ಬಹಳ ತುರ್ತಾಗಿ ವೃತ್ತದಲ್ಲಿ ಪ್ರತಿಷ್ಠಾಪನೆಗೊಂಡಿತ್ತು ಆದರೇ ವೃತ್ತಕ್ಕೆ ಬಹಳ ಚಿಕ್ಕದಾಗಿತ್ತು ನೋಡಲು ಅಷ್ಟೋಂದು ಆಕರ್ಷಣೆ ಇರಲಿಲ್ಲ ಹಾಗಾಗಿ ಯೋಗ್ಯ ಶಿಲ್ಪಿಗಳಿಂದ ತಯಾರಿಸಿ ನೂತನ ಡಾ, ಬಾಬಾ ಸಾಹೇಬ ಅಂಬೇಡ್ಕರವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದು ತಾಲೂಕಿನ ಬಹುತೇಕ ಎಲ್ಲ ದಲಿತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಅಭಿಪ್ರಾಯವಾಗಿತ್ತು. ಈ ಹಿನ್ನೇಲೆ ಸ್ಥಳಿಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರನ್ನು ಎಲ್ಲ ದಲಿತ ಮುಖಂಡರನ್ನು ಬೇಟಿಯಾಗಿ ನಮ್ಮ ಬೇಡಿಕೆ ಅವರ ಮುಂದಿಟ್ಟಿದ್ದೇವು

ಆದರೇ ನಮ್ಮ ಬೇಡಿಕೆಗೆ ಸಮರ್ಪಕವಾಗಿ ಸ್ಪಂದಿಸಿದ ಅವರು ಸಂಬಂಧಪಟ್ಟ ಅಧಿಕಾರಿಗಳೋಂದಿಗೆ ಮಾತನಾಡಿಸುಮಾರು 50 ಲಕ್ಷ ವೆಚ್ಚದಲ್ಲಿ ತೆಲಂಗಾಣದ ಖ್ಯಾತ ಶಿಲ್ಪಿಗಳಿಂದ 11 ಅಡಿ ಎತ್ತರದ ಹೊಸದಾಗಿ ಡಾ, ಬಾಬಾಸಾಹೇಬ ಅಂಬೇಡ್ಕರವರ ಅದ್ಭುತ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಲು ತಿರ್ಮಾಸಲಾಯಿತು.

ಅದರಂತೆ ಸಧ್ಯ ಹೊಸ ಮೂರ್ತಿಯೂ ಕೂಡ ತಯಾರಾಗಿದ್ದು ಮುಂಬರುವ ಫೇಬ್ರುವರಿ ತಿಂಗಳ ಕೋನೆವಾರದಲ್ಲಿ ಬ್ರಹತ್ ಸಮಾರಂಭವನ್ನು ಏರ್ಪಡಿಸಿ ಈ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಂದ ಡಾ, ಬಿ ಆರ್ ಅಂಬೇಡ್ಕರ ವರ ನೂತನ ಮೂರ್ತಿ ಅನಾವರಣ ಗೊಳಿಸಲು ತಿರ್ಮಾನಿಸಿದ್ದು. ಈ ಹಿನ್ನೇಲೆಯಲ್ಲಿ ಇದಕ್ಕೆ ಮುಖ್ಯಕಾರಿಣಿಕರ್ತರಾಗಿರುವ ಸ್ಥಳಿಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಕಾರ್ಯಕ್ಕೆ ಇಡಿ ದಲಿತ ಸಮೂದಾಯ ಮಾತ್ರವಲ್ಲದೇ ತಾಲೂಕಿನ ಎಲ್ಲ ಪ್ರಗತಿಪರ ಸಂಘಟನೆಗಳ ಮುಖಂಡ ವತಿಯಿಂದ ಅಭಿನಂದಿಸಲಾಗುವುದು ಎಂದರು.

ಈ ವೇಳೆ ಬಸವರಾಜ ಪೂಜಾರಿ, ಹಣಮಂತ ಚಲವಾದಿ, ರೇವಣೇಪ್ಪ ಚಲವಾದಿ, ಪ್ರಶಾಂತ ಕಾಳೆ, ಯಮುನಪ್ಪ ಹಂಗರಗಿ, ಬಸವರಾಜ ಚಲವಾದಿ, ಶರಣಬಸ್ಸು ಚಲವಾದಿ, ಮಹಾಂತೇಶ ಬಾಲಗಕೋಟೆ ಸೇರಿದಂತೆ ಹಲವರು ಇದ್ದರು.