
ಕೋಲಾರ,ಆ,೧೯:ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ಹೊಸ ಪಡಿತರ ಚೀಟಿಗಳನ್ನು ನೀಡಲು ಸದ್ಯಕ್ಕೆ ಅರ್ಜಿಸಲ್ಲಿಸಲು ಅವಕಾಶ ಕಲ್ಪಿಸಿಲ್ಲ. ಇದಕ್ಕೆ ಕಾರಣವನ್ನು ಮುಂದಿನ ದಿನಗಳಲ್ಲಿ ಸ್ವಷ್ಟ ಪಡಿಸುವುದಾಗಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾದ್ಯಮದವರೊಂದಿಗೆ ಅವರು ಮಾತನಾಡಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಸಿ ಆರ್ಹರಿಗೆ ಕಾರ್ಡ್‌ನೀಡಲು ಸೂಚನೆ ನೀಡಲಾಗಿದೆ. ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ಕಾರ್ಡ್‌ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿಲ್ಲ ಎಂದು ಹೇಳಿದರು,
ಈ ತಿಂಗಳು ಕೊಡ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಗದು ನೀಡಲಾಗುತ್ತಿದೆ. ಕಳೆದ ತಿಂಗಳು ಖಾತೆಗಳ ಮಾಹಿತಿ ಇಲ್ಲದೆ ಅವಕಾಶ ವಂಚಿತರಾದ ೨೫ ಲಕ್ಷ ಮಂದಿ ಫಲಾನುಭವಿಗಳಿಗೆ ಈ ಭಾರಿ ಅನ್ನಭಾಗ್ಯ ಯೋಜನೆಯಡಿ ಹಣವನ್ನು ಸಂದಾಯ ಮಾಡಲಾಗುವುದು ಎಂದು ತಿಳಿಸಿದರು,
ಮುಂದಿನ ತಿಂಗಳಿಂದ ೧೦ ಕೆ.ಜಿ. ಅಕ್ಕಿ ನೀಡಲು ಪ್ರಯತ್ನಿಸಲಾಗುತ್ತಿದೆ. ಅದರೆ ಅದು ಯಶಸ್ವಿಯಾಗುವುದು ಅನುಮಾನಸ್ವದವಾಗಿದೆ. ಈಗಾಗಲೇ ನಿಮಗೆ ತಿಳಿಸಿರುವಂತೆ ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮುಖ್ಯಸ್ಥರ ಜೂತೆ ಸಮಾಲೋಚನೆ ನಡೆಸಲಾಗಿದೆ. ೧೦ ದಿನಗಳ ಒಳಗೆ ಬಹುತೇಕ ಸ್ವಷ್ಟ ಚಿತ್ರಣ ಸಿಗಲಿದೆ ಎಂದರು.
ಜಿಲ್ಲಾಮಟ್ಟದ ಆಹಾರ ಇಲಾಖೆಯ ಆಧಿಕಾರಿಗಳ ಸಭೆ ನಡೆಸಿದ್ದೇವೆ. ಈ ತಿಂಗಳ ೨೫ ಅಥವಾ ೨೬ ರೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವನ್ನು ಸಂದಾಯ ಮಾಡಲಾಗುವುದು.ಜೋಳ ಮತ್ತು ರಾಗಿ ಹಾಗೂ ಅಕ್ಕಿಯನ್ನು ಎಷ್ಟು ಪ್ರಮಾಣದಲ್ಲಿ ಯಾವ,ಯಾವ ಪ್ರದೇಶದಲ್ಲಿ ಬಳಕೆ ಮಾಡುತ್ತಾರೆ ಎಂಬುವುದರ ಕುರಿತು ಮಾಹಿತಿಯ ಸಮೀಕ್ಷೆಯನ್ನು ಪಡೆಯಲಾಗುತ್ತಿದೆ ಎಂದ ಅವರು ಇಲಾಖೆಯಲ್ಲಿ ಖಾಲಿ ಇರುವ ೨೧೮೧ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.