ಹೊಸ ಟರ್ಮಿನಲ್ 2ನ ವಿಶೇಷತೆಗಳು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಹೊಸ ಟರ್ಮಿನಲ್ 2ನ ವಿಶೇಷತೆಗಳು ಜನಮನ ಸೆಳೆದಿದ್ದು, ಇದು 2,ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಹೊಂದಿದೆ. ಈ ಟರ್ಮಿನಲ್ 2 ವನ್ನು ‘ಗಾರ್ಡನ್ ಟರ್ಮಿನಲ್’ ಎಂದು ಕರೆಯಲಾಗುತ್ತದೆ. ಇದರ ವಿಶೇಷತೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.