ಹೊಸ ಟರ್ಮಿನಲ್ ಕಟ್ಟಡ ಮೋದಿ ಲೋಕಾರ್ಪಣೆ

ಚೆನ್ನೈಜ,೨- ತಮಿಳುನಾಡಿನ ಎರಡನೇ ಅತಿದೊಡ್ಡ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವ ಮೂಲಕ ವಿಮಾನಯಾನ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಕೇಂದ್ರ ಸಚಿವ ಎಲ್. ಮುರುಗನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು, ಇದಕ್ಕೂ ಮುನ್ನ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರನ್ನು ಸ್ಟಾಲಿನ್ ಮತ್ತು ಸಂಪುಟದ ಸಹದ್ಯೋಗಿಗಳು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು.
೧೧೦೦ ಕೋಟಿಗೂ ಹೆಚ್ಚು ವೆಚ್ಚದಲ್ಲಿ ಈ ಹೊಸ ಟರ್ಮಿನಲ್‌ನ ಅಭಿವೃದ್ಧಿ ಪಡಿಸಲಾಗಿದೆ ಎರಡು ಹಂತದ ಅಂತರಾಷ್ಟ್ರೀಯ ಟರ್ಮಿನಲ್ ವಾರ್ಷಿಕವಾಗಿ ೪೪ ಲಕ್ಷ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ, ಜನದಟ್ಟಣೆ ಸುಮಾರು ೩,೫೦೦ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯ ದೃಷ್ಟಿಯಿಂದ ತಮಿಳುನಾಡಿನ ಚೆನ್ನೈ ನಂತರ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.
ಹೊಸ ಟರ್ಮಿನಲ್ ಕಟ್ಟಡ ೬೦ ಚೆಕ್ ಇನ್ ಕೌಂಟರ್‌ಗಳು, ೫ ಬ್ಯಾಗೇಜ್ ಕರೋಸೆಲ್‌ಗಳು, ೬೦ ಆಗಮನ ವಲಸೆ ಕೌಂಟರ್‌ಗಳು ಮತ್ತು ೪೪ ನಿರ್ಗಮನ ಎಮಿಗ್ರೇಷನ್ ಕೌಂಟರ್‌ಗಳನ್ನು ಒಳಗೊಂಡಿದೆ.
ಹೊಸ ಟರ್ಮಿನಲ್ ಕಟ್ಟಡದ ವಿನ್ಯಾಸ ತಿರುಚಿರಾಪಳ್ಳಿಯ ಸಾಂಸ್ಕೃತಿಕ ಸ್ಪೂರ್ತಿಯಿಂದ ಪ್ರೇರಿತವಾಗಿದೆ.ಕೋಲಂ ಕಲೆಯಿಂದ ಶ್ರೀರಂಗಂ ದೇವಾಲಯದ ಬಣ್ಣಗಳವರೆಗೆ ಕಲಾ ಪ್ರಕಾರಗಳನ್ನು ಚಿತ್ರಿಸುತ್ತದೆ ಮತ್ತು ಅದರ ಕ್ರಿಯಾತ್ಮಕ ಬಾಹ್ಯ ಮುಂಭಾಗ ಮತ್ತು ಭವ್ಯವಾದ ಒಳಾಂಗಣಗಳ ಮೂಲಕ ಪ್ರಪಂಚದ ಇತರ ಭಾಗಗಳಿಗೆ ಭಾರತದ ಸಂಪರ್ಕವನ್ನು ಚಿತ್ರಿಸುವ ಇತರ ಥೀಮ್ ಕಲಾಕೃತಿಗಳನ್ನು ಚಿತ್ರಿಸುತ್ತದೆ.
ಇದೇ ವೇಳೆ ತಮಿಳುನಾಡಿನಲ್ಲಿ ಒಟ್ಟು ೧೯,೮೫೦ ಕೋಟಿ ರೂಪಾಯಿಗಳ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು.
ಎರಡು ದಿನಗಳ ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳ ಪ್ರವಾಸ ಆರಂಭಿಸಿರುವ ಪ್ರಧಾನಿ ಅವರು ದೇಶದ ದಕ್ಷಿಣ ಭಾಗಗಳಿಗೆ ಅವರ ಭೇಟಿಯ ಸಂದರ್ಭದಲ್ಲಿ, ಅವರು ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಕುರಿತು ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ತಮಿಳುನಾಡು ಮತ್ತು ಲಕ್ಷದೀಪ, ಕೇgಳದ ಪ್ರವಾಸದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ತಮಿಳುನಾಡಿನ ತಿರುಚಿರಾಪಳ್ಳಿಯಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ ಎಂದು ಹೇಳಿದ್ದಾರೆ.
ನಾಳೆ ಲಕ್ಷದ್ವೀಪದ ಜನರ ನಡುವೆ ಇರಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. “ರೂ ೧೧೫೦ ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳು ಉದ್ಘಾಟನೆ ಅಥವಾ ಅವುಗಳ ಅಡಿಪಾಯ ಹಾಕಲಾಗುವುದು. ಈ ಕೆಲಸಗಳು ಉತ್ತಮ ಇಂಟರ್ನೆಟ್ ಸಂಪರ್ಕ, ಶುದ್ಧ ಕುಡಿಯುವ ನೀರು ಪೂರೈಕೆ, ಸೌರ ಶಕ್ತಿ, ಆರೋಗ್ಯ ರಕ್ಷಣೆ ಮತ್ತು ಹೆಚ್ಚಿನದನ್ನು ಖಾತರಿಪಡಿಸುವ ಯೋಜನೆಗಳನ್ನು ಒಳಗೊಂಡಿವೆ” ಎಂದು ತಿಳಿಸಿದ್ದಾರೆ.