ಹೊಸ ಜಿ ಎಸ್ ಟಿ ನಿಯಮ: ಸಣ್ಣ ಕೈಗಾರಿಕೆಗಳಿಗೆ ವಿನಾಯಿತಿ

ನವದೆಹಲಿ, ಡಿ.27- ಹೊಸ ಜಿಎಸ್ ಟಿ ನಿಯಮದಡಿ ಅತಿ ಸಣ್ಣ ,ಸಣ್ಣ ಮತ್ತು ಮದ್ಯಮ ವಲಯದ ಕೈಗಾರಿಕೆಗಳನ್ನು ಸರಕು ಮತ್ತು ಸೇವಾ ತೆರಿಗೆ ಪಾವತಿಯಿಂದ ಕೇಂದ್ರ ಹಣಕಾಸು ಸಚಿವಾಲಯ ವಿನಾಯಿತಿ‌ ನೀಡಿದೆ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು –
ಎಂಎಸ್‌ಎಂಇಗಳು ಕನಿಷ್ಠ 1 ಶೇಕಡಾ ಸರಕು ಮತ್ತು ಸೇವಾ ತೆರಿಗೆ -ಜಿಎಸ್‌ಟಿ ಯನ್ನು ನಗದು ರೂಪದಲ್ಲಿ ಪಾವತಿಸಬೇಕಾಗಿಲ್ಲ, ವಾರ್ಷಿಕ ವಹಿವಾಟು 6 ಕೋಟಿಗಿಂತ ಕಡಿಮೆ ಇರುವ ವ್ಯವಹಾರಗಳನ್ನು ಹೊಸ ನಿಯಮದಿಂದ ವಿನಾಯಿತಿ ನೀಡಲಾಗಿದೆ, ಹಣಕಾಸು ಸಚಿವಾಲಯ ತಿಳಿಸಿದೆ

ವಾರ್ಷಿಕವಾಗಿ 6 ಕೋಟಿ ರೂಪಾಯಿ ವ್ಯವಹಾರ ನಡೆಸುವ. ಅತಿಸಣ್ಣ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಜಿಎಸ್ಟಿ ಶೇಕಡ ಒಂದರಷ್ಟು ಪಾವತಿ ಮಾಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಕಳೆದ ವಾರ ಜಿಎಸ್ ಟಿ ನಿಯಮಗಳಲ್ಲಿ ಬದಲಾವಣೆ ತಂದಿದೆ. ಜಿಎಸ್ ಟಿ 99 ಪ್ರತಿಶತಕ್ಕೆ ಬಿಡುಗಡೆ ಮಾಡಲು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಬಳಕೆ ನಿರ್ಬಂಧಿಸಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ

ನಕಲಿ ಇನ್‌ವಾಯ್ಸಿಂಗ್ ಮೂಲಕ ಐಟಿಸಿಯ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ

“ಸಣ್ಣ ಉದ್ಯಮಗಳು ಮತ್ತು ನಿಜವಾದ ತೆರಿಗೆದಾರರನ್ನು ರಕ್ಷಿಸಲು, ನಿಯಮಕ್ಕೆ ಕೆಲವು ವಿನಾಯಿತಿ ತರಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ನೋಂದಾಯಿತ ಘಟಕಗಳು ಈಗಾಗಲೇ 1 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ-ತೆರಿಗೆಯಾಗಿ ಠೇವಣಿ ಇಟ್ಟಿರುವ ಸಂದರ್ಭಗಳಲ್ಲಿ ಹೊಸ ನಿಯಮ ಅನ್ವಯಿಸುವುದಿಲ್ಲ ಎಂದು ಹೇಳಿದೆ

ರಫ್ತು ಖಾತೆಗೆ ಹಿಂದಿನ ಹಣಕಾಸು ವರ್ಷದಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಮರುಪಾವತಿ ಪಡೆದ ನೋಂದಾಯಿತ ಘಟಕಗಳಿಗೆ ಇದು ಅನ್ವಯಿಸುವುದಿಲ್ಲ. ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಅಧಿಕಾರಿಗಳನ್ನು ಸಹ ನಿಯಮದಿಂದ ವಿನಾಯಿತಿ ನೀಡಲಾಗಿದೆ.ಸರಕು ಮತ್ತು ಸೇವಾ ತೆರಿಗೆ ಹೊಸದಾಗಿ ತಿದ್ದುಪಡಿ ತರಲಾಗಿದ್ದು ಹೊಸ ನಿಯಮದ ಪ್ರಕಾರ ಸಣ್ಣ ಅತಿ ಸಣ್ಣ ಮಧ್ಯಮ ಕೈಗಾರಿಕೆಗಳು ಜಿಎಸ್ ಟಿ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.