ಹೊಸ ಜಿಲ್ಲಾ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ಅನಿರೀಕ್ಷಿತ ಭೇಟಿ- ಪರಿಶೀಲನೆ

ಯಾದಗಿರಿ: ಜು, 23: ಕರ್ನಾಟಕ ಲೋಕಾಯುಕ್ತ ಪೆÇೀಲಿಸ್ ಅಧೀಕ್ಷಕ ಶ್ರೀ ಎ.ಆರ್ .ಕರ್ನೂಲ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ನಗರದ ಹೊಸ ಜಿಲ್ಲಾ ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ಹಾಜರಾತಿ ಪುಸ್ತಕವನ್ನು ನೋಡಲಾಗಿ ವೈದ್ಯಾಧೀಕಾರಿಗಳು ಮತ್ತು ಕೆಲವು ಸಿಬ್ಬಂದಿ ವರ್ಗದವರು ರುಜು ಹಾಕದೇ ಇರುವುದು ಕಂಡು ಬಂದಿದ್ದು ,ಪ್ರತಿ ದಿನ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಿ ,ಹಾಜರಾತಿ ಪುಸ್ತಕದಲ್ಲಿ ರುಜು ಮಾಡುವಂತೆ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರ ಚಲನ-ವಲನ ರಜಿಸ್ಟಾರನ್ನು ನಿರ್ವಹಿಸುವಂತೆ ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕ ಎ.ಆರ್ ಕರ್ನೂಲ್ ಅವರು ತಿಳಿಸಿದರು.

ಸರಕಾರಿ ಆಸ್ಪತ್ರೆ ವಿವಿಧ ವಾರ್ಡಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಕಾಪಾಡುವಂತೆ ತಿಳಿಸಿ, ಮೊದಲನೆ ಮಹಡಿಯ ಪಿ.ಎಮ್.ಆರ್ ವಿಭಾಗದ ಹತ್ತಿರ ರೋಗಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿಸುವಂತೆ ಸೂಚಿಸಿದರು.

ಆಸ್ಪತ್ರೆಯಲ್ಲಿನ ಲಿಫ್ಟ್‍ಗಳನ್ನು ಪರೀಶಿಲಿಸಲಾಗಿ, 04 ಲಿಫ್ಟ್‍ಲ್ಲಿ ಕೇವಲ 01 ಲಿಫ್ಟ್ ಮಾತ್ರ ಸುಸ್ಥಿತಿಯಲ್ಲಿದ್ದು , ರೋಗಿಗಳಿಗೆ ತೊಂದರೆಯಾಗದಿರಲು ಕೂಡಲೇ ಲಿಫ್ಟನ್ನು ದುರಸ್ಥಿಪಡಿಸುವಂತೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳು ಸಮವಸ್ತ್ರ ಹಾಗೂ ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ನೀಲಮ್ಮ .ಎಸ್. ರವರಿಗೆ ಸೂಚಿಸಿದರು.

ಅದರಂತೆ ಸಿ.ಟಿ ಸ್ಕ್ಯಾನ್ ಕೇಂದ್ರವನ್ನು ಕೂಡ ಕೂಡಲೇ ಆರಂಭಿಸುವಂತೆ ಸೂಚಿಸಿ ಆಸ್ಪತ್ರೆಯ ಆವರಣ , ಶೌಚಾಲಯದ ಶುಚಿತ್ವ ಕಾಪಾಡಲು ಸೂಚಿಸಿ, ಕೋವಿಡ್ -19 ಗೆ ಸಂಬಂಧಪಟ್ಟಂತೆ , ಮುಂಜಾಗೃತಾ ಕ್ರಮ ವಹಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಡಿ.ವೈ.ಎಸ್.ಪಿ, ಮೊಹಮ್ಮದ ಇಸ್ಮಾಯಿಲ್, ಪೆÇೀಲಿಸ್ ನಿರೀಕ್ಷಕರಾದ ಮಹಾದೇವ ಎನ್.ಶಿರಹಟ್ಟಿ, ಮತ್ತು ಅರುಣಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು