ಹೊಸ ಗುರು ಶಿಷ್ಯರು ತಿಂಗಳಾಂತ್ಯಕ್ಕೆ ತೆರೆಗೆ

ದಶಕಗಳ ಹಿಂದೆ ತೆರೆಗೆ ಬಂದು ಯಶಸ್ಸು ಕಂಡಿದ್ದ “ಗುರುಶಿಷ್ಯರು” ಇದೀಗ ಅದೇ ಹೆಸರಲ್ಲಿತೆರೆಗೆ ಬರಲು ಸಜ್ಜಾಗಿದೆ. ಗ್ರಾಮೀಣ ಪರಿಸರ, ಖೊ ಖೋ ಆಟ ಮತ್ತು ಹುಡುಗರು ಅವರ ಗುರುವಿನ ಸುತ್ತ ನಡೆಯುವ ಕಥೆ ಹೊಸ ಗುರುಶಿಷ್ಯರದ್ದು

ಚಿತ್ರದ ಟ್ರೈಲರ್ ಬಿಡುಗಡೆ ದ್ವಾರಕೀಶ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಪ್ರಜ್ಚಲ್ ದೇವರಾಜ್, ರವಿಶಂಕರ್‍ಗೌಡ, ಶಾಸಕ ರಾಜುಗೌಡ ಸೇರಿದಂತೆ ಅನೇಕರು ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು ,ಚಿತ್ರ ಇದೇ ತಿಂಗಳ 23 ರಂದು ತೆರೆಗೆ ಬರಲಿದೆ.

ಚಿತ್ರದಲ್ಲಿ ನಟಿಸಿರುವ ಮಕ್ಕಳು ಅವರ ತಂದೆ-ತಾಯಿಯೊಂದಿಗೆ ಆಗಮಿಸಿ ಪರಿಚಯ ಮತ್ತು ಪಾತ್ರದ ಬಗ್ಗೆ ಮಾಹಿತಿ ನೀಡಿದ್ದುದು ವಿಶೇಷವಾಗಿತ್ತು. ಶಾಲೆಗೆ ಹೊರಡು ಅಂದರೆ ಹಿಂದು ಮುಂದು ನೋಡುವ ಮಕ್ಕಳು ಚಿತ್ರೀಕರಣಕ್ಕೆ ತೆರಳಲು ಬೆಳಗಿನ ಜಾವವೇ ರೆಡಿಯಾಗುತ್ತಿದ್ದರು. ಮಕ್ಕಳು ಬೆಳ್ಳಿತೆರೆ ಪ್ರವೇಶ ಮಾಡಿರುವುದು ಖುಷಿಯಾಗಿದೆ ಎಂದು ನಟರು ಮತ್ತು ಅವರ ಪತ್ನಿಯರು ಸಂತಸ ಹಂಚಿಕೊಂಡರು.

ಚಿತ್ರದಲ್ಲಿ ನಾಯಕ ಶರಣ್ ಪುತ್ರ ಹೃದಯ್, ನೆನೆಪಿರಲಿ ಪ್ರೇಮ್ ಪುತ್ರ ಏಕಾಂತ್,ನಟ ನವೀನ್ ಕೃಷ್ಣ ಪುತ್ರ ಹರ್ಷಿತ್,ಬುಲ್ಲೆಟ್ ಪ್ರಕಾಶ್ ಪುತ್ರ ರಕ್ಷಕ್,ರವಿಶಂಕರ್ ಗೌಡ ಪುತ್ರ ಸೂರ್ಯ,ಶಾಸಕ ರಾಜು ಗೌಡ ಪುತ್ರ ಮಣಿಕಂಠ, ಗ್ರಾಮೀಣ ಪ್ರತಿಭೆಗಳಾದ

ರುದ್ರಗೌಡ,  ಸಾಂಬ ಸದಾಶಿವ , ಆಶ್ರಫ್ ಅನೂಪ್,ಅಮಿತ್ ,ಸಂದೇಶ್ -ಸಾಗರ್ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಶರಣ್ ಮತ್ತು ತರುಣ್ ಸುದೀರ್  ಜಂಟಿಯಾಗಿ ನಿರ್ಮಾಣ ಮಾಡಿದ್ದು ಶರಣ್ ನಾಯಕರಾಗಿದ್ದಾರೆ. ಜಡೇಶ್ ಕುಮಾರ್  ಹಂಪಿ ನಿರ್ದೇಶನ ಮಾಡಿದ್ಸಾರೆ.

ಇದೇ ವೇಳೆ ಹಿರಿಯ ಕಲಾವಿದರಾದ ಎಂ.ಎಸ್ ಉಮೇಶ್, ಡಿಂಗ್ರಿ ನಾಗರಾಜ್, ಎಂ.ಎನ್ ಲಕ್ಷ್ಮಿದೇವಿ ಅವರನ್ನು ತಂಡ ಸನ್ಮಾನಿಸಿತು. ಹಿರಿಯ ನಟ ದ್ವಾರಕೀಶ್,ನಮ್ಮ ಗುರು ಶಿಷ್ಯರು 25ವಾರ ಓಡಿತ್ತು ಈ ಚಿತ್ರ ಕನಿಷ್ಟ ನೂರು ದಿನವಾದರೂ ಓಡಲಿ,ತಂಡಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು

ಸಂಬಾಷಣೆ ಬರೆದಿರುವ ಮಾಸ್ತಿ, ಕಥೆ ಹೇಳಿದ್ದರು ಇಷ್ಟಾಯ್ತು ಇಡೀ ತಂಡಕ್ಕೆ ಒಳ್ಳೆಯದಾಗಲಿ ಗುರು ಶಿಷ್ಯರಿಗೆ ಸಲಗ ಬಲ ಸಿಕ್ಕಿದೆ ಎಂದರು. ನಟಿ  ನಿಶ್ವಿಕಾ ನಾಯ್ಡು,, ಅಮ್ಮ ಐ ಲವ್ ಯೂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದೇನೆ. ಮೊದಲ ಬಾರಿಗೆ ಹಳ್ಳಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು  ಸೂಜಿ ಎನ್ನುವ ಹುಡುಗಿ ಪಾತ್ರ. ಶರಣ್  ಜೊತೆ ಕೆಲಸ ಮಾಡಿದ್ದು ಖುಷಿ ಅಗಿದೆ ಎಂದರು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತವಿದೆ.