ಹೊಸ ಕೋರ್ಸ ಅಭಿವೃದ್ಧಿಗಾಗಿ ಮೂಲ ಸೌಲಭ್ಯ: ಗುಡಸಿ

ಧಾರವಾಡ,ಜು23: ಹೊಸದಾಗಿ ಪ್ರಾರಂಭಿಸಿದ ಕೋರ್ಸಗಳ ಅಭಿವೃದ್ಧಿಗಾಗಿ ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವದು ಎಂದು ಕವಿವಿ ಕುಲಪತಿ ಪೆÇ್ರ.ಕೆ.ಬಿ.ಗುಡಸಿ ಹೇಳಿದರು.
ಅವರು ಕರ್ನಾಟಕ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ಸಸ್ಯಶಾಸ್ತ್ರ ವಿಷಯದ ನೂತನ ಸ್ನಾತಕೋತ್ತರ ಪದವಿ ವಿಭಾಗವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹೊಸ ಕೋರ್ಸ ಪ್ರಾರಂಭಿಸುವದು ಸುಲಭ ಅದನ್ನು ನಿರ್ವಹಿಸಿಲು ಬಹಳ ಸಿದ್ದತೆ, ಪರಿಶ್ರಮ ಧೃಡತೆ ಬೇಕಾಗುತ್ತದೆ ಆದ್ದರಿಂದ ವಿಭಾಗದ ಶಿಕ್ಷಕರ ಮತ್ತು ಸಿಬ್ಬಂದಿಗಳ ಮೇಲೆ ಹೆಚ್ಚು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ.
ವಿಭಾಗ ಮತ್ತು ಹೊಸದಾಗಿ ಪ್ರಾರಂಭಿಸಿದ ಕೋರ್ಸುಗಳ ಪುನಶ್ಚೇತನಕ್ಕೆ ಶಿಕ್ಷಕರ, ಸಿಬ್ಬಂದಿಗೆ ಸಹಕಾರ ಅಗತ್ಯ ಎಂದ ಅವರು ಪ್ರಸ್ತುತ ಕೆಸಿಡಿ ಸ್ನಾತಕೋತ್ತರ ವಿಜ್ಞಾನದ ವಿದ್ಯಾರ್ಥಿಗಳು ಕವಿವಿ ಆವರಣದಲ್ಲಿರುವ ವೈಜ್ಞಾನಿಕ ಉಪಕರಣದ ಪ್ರಯೋಗಾಲಯ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಗ್ರಂಥಾಲಯಕ್ಕೆ ಪುಸ್ತಕ ಒದಗಿಸುವುದು ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ಸಿದ್ದ ಎಂದ ಅವರು ಪ್ರಾಯೋಗಿಕ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ಪ್ರಸ್ತುತ ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಬೆಳೆಯಬೇಕಾಗಿದೆ ಎಂದರು.
ಡಾ.ಕೆ.ಕೋಟ್ರೇಶ ಪ್ರಾಸ್ತಾವಿಕವಾಗಿ ಮಾತನಾಡಿ ಬಹಳ ವರ್ಷದಿಂದ ಸ್ನಾತಕೋತ್ತರ ತರಗತಿ ಪ್ರಾರಂಭಿಸಬೇಕು ಉದ್ದೇಶ ಇತ್ತು ಹಾಗಾಗಿ ಪ್ರಸ್ತುತ ವರ್ಷದಿಂದ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಷಯದ ವಿಭಾಗದ ಸ್ನಾತಕೋತ್ತರ ಕೋರ್ಸ್ ಪ್ರಾರಂಭವಾಗುತ್ತಿರುವದು ಸಂತಸದ ವಿಷಯ ಎಂದ ಅವರು ಪ್ರಯೋಗಾಲಯ ಸೇರಿದಂತೆ ತರಗತಿ ಕೊಠಡಿಗಳನ್ನು ಹೊಂದಿದ್ದು ಸದ್ಯ ಸುಸಜ್ಜಿತ ವಿಭಾಗವಾಗಿದೆ ಎಂದರು ಸದ್ಯ ಹದಿನೆಂಟು ಸಂಶೋಧನಾ ವಿದ್ಯಾರ್ಥಿಗಳು, ಇಪ್ಪತೈದು ಸ್ನಾತಕೋತ್ತರ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಸಿ.ಚೌಗಲಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಡಿ.ಎಮ್.ಸಿಂಗ್, ಡಾ.ಸಿ.ಜಿ.ಪಾಟೀಲ ಡಾ.ಕಿರಣ ಕೋಲ್ಕಾರ, ಡಾ.ನಾಗಭೂಷಣ ಹರಿಹರ, ಡಾ.ವೀಣಾ ರೋಖಡೆ,ಅಕ್ಷಯ ಪಾಟೀಲ, ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಜರಿದ್ದರು.