ಹೊಸ ಕೋರ್ಸ್ ಗಳಿಗೆ ಸೇರ್ಪಡೆಯಾಗುವ
 ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.25: ನಗರದ ಬಿ.ಡಿ.ಎ.ಎ ಸಭಾಂಗಣದಲ್ಲಿ ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ದಿ ಕೇಂದ್ರದಿಂದ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಹಾಗೂ ಹೊಸ ಕೋರ್ಸಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಡಾ!! ಡಿ.ಎಲ್. ರಮೇಶ್ ಗೋಪಾಲ್, ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಚೇಂಬರ್ ಕೌಶಲ್ಯಾಭಿವೃದ್ದಿ ಕೇಂದ್ರ ದಿಂದ ನಡೆಸುತ್ತಿರುವ ವಿವಿಧ ಕೋರ್ಸಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ದಿ ಜ್ಞಾನವನ್ನು ನೀಡಲು ಹಲುವಾರು ಕೋರ್ಸಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಸಿ. ಶ್ರೀನಿವಾಸ ರಾವ್, ಅಧ್ಯಕ್ಷರು ಸಂಸ್ಥೆಯ  ಗೌರವ ಕಾರ್ಯದರ್ಶಿಗಳಾದ ಯಶವಂತರಾಜ್ ನಾಗಿರೆಡ್ಡಿ, ಶ್ರೀಮತಿ ಡಾ:ಅರುಣಾ ಕಾಮಿನೇನಿ, ಶ್ರೀಮತಿ ಸುಂಕಾ ಚಂದ್ರಿಕಾ ಹಾಗೂ ಶ್ರೀಮತಿ ಪದ್ಮಾವತಿ ಶ್ರೀನಿವಾಸ್, ಮಹಿಳಾ ವಿಭಾಗದ, ಅಧ್ಯಕ್ಷರು,ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಯಶವಂತ ರಾಜ್ ನಾಗಿ ರೆಡ್ಡಿ, ಮಾತನಾಡುತ್ತಾ,ನಮ್ಮ ಸಂಸ್ಥೆಯು ವ್ಯಾಪಾರಸ್ಥರು ಹಾಗೂ ಕೈಗಾರಿಕಾ ಉದ್ಯಮದಾರರಿಗೆ ತೊಂದರೆಗಳನ್ನು ನಿವಾರಣೆ ಮಾಡುವ ಸಂಸ್ಥೆಯಾಗಿದ್ದು. ಇದರ ಜೊತೆಗೆ ಹಲುವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆಸಲ್ಲಿಸಿದ್ದು ಕರ್ನಾಟಕದಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ ನಂತರ ಎರಡನೇ ಸ್ಥಾನ ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಗೆ ಇರುತ್ತದೆ ಎಂದು ತಿಳಿಸಿದರು. ನಮ್ಮ ಸಂಸ್ಥೆಯಿಂದ ರೈತರಿಗಾಗಿ ಉಚಿತ ಆಸ್ಪತ್ರೆಯನ್ನು, ಬಡ ವಿದ್ಯಾರ್ಥಿಗಳಿಗಾಗಿ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
 ನಮ್ಮ ಸಂಸ್ಥೆ ನೀಡುತ್ತಿರುವ ಉಚಿತ ಶಿಕ್ಷಣದಿಂದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಕೌಶಲ್ಯಾಭಿವೃದ್ದಿ ಜ್ಞಾನದ ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂಬ ನಮ್ಮ ಆಶಯ ಎಂದು ತಿಳಿಸಿದರು. ಸಿ. ಶ್ರೀನಿವಾಸ್ ರಾವ್ ಮಾತನಾಡುತ್ತಾ, ಸಂಸ್ಥೆ ನಡೆದ ಬಂದ ದಾರಿ, ಸಂಸ್ಥೆ ನಡೆಸುತ್ತಿರುವ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸುಮಾರು 1400 ವಿದ್ಯಾರ್ಥಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಿದ್ದೇವೆ ಇದರಲ್ಲಿ 450 ವಿದ್ಯಾರ್ಥಿಗಳಿಗೆ ಕೆಲಸವನ್ನು ಕೊಡಿಸಿದ್ದೇವೆ ಎಂದು ತಿಳಿಸಿದರು. ಶ್ರೀಮತಿ ಡಾ:ಅರುಣಾ ಕಾಮಿನೇನಿ ಮಾತನಾಡುತ್ತಾ, “ಸಜ್ಜನರ ಸಂಗ ಹೆಜ್ಜೇನು ಸವಿದಂತೆ” ಎಂಬ ನಾನ್ನುಡಿ ಹೇಳಿದಂತೆ ಚೇಂಬರ್ ಆಫ್ ಕಾಮರ್ಸ್ ಮಾಡಿರುವ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ನಂತರ ವಿದ್ಯಾರ್ಥಿಗಳನ್ನು ಕುರಿತು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು ಇಂತಹ ಸಂಸ್ಥೆಗಳು ಕೊಡುತ್ತಿರುವ ಕೌಶಲ್ಯ ತರಬೇತಿಯನ್ನು ಪಡೆದುಕೊಂಡು ಪ್ರಯೋಜಿಕರಾಗಬೇಕು ಎಂದು ತಿಳಿಸಿದರು.ಶ್ರೀಮತಿ ಚಂದ್ರಿಕಾ ಮಾತನಾಡುತ್ತಾ ವಿದ್ಯಾರ್ಥಿಗಳು ನಿರಂತರ ಶ್ರಮದಿಂದ ಯಾವುದೇ ಕೆಲಸದ ಗುರಿ ಮುಟ್ಟಬಹುದು ಎಂದು ತಿಳಿಸಿದರು.
ಶ್ರೀಮತಿ ಪದ್ಮಾವತಿ ಶ್ರೀನಿವಾಸ್, ಮಾತನಾಡುತ್ತ, ವಿದ್ಯಾರ್ಥಿಗಳು ಕೌಶಲ್ಯ ಜ್ಞಾನ ಪಡೆದುಕೊಂಡು ತಮ್ಮ ಕನಸು ನನಸು ಮಾಡಿಕೊಳ್ಳುಬಹುದು ಎಂದು ತಿಳಿಸಿದರು. ಪೋಷಕರು ಸ್ವಾತಂತ್ಯ ಕೊಟ್ಟಿದ್ದಾರೆಂದು ಪೋಷಕರಿಗೆ ಮೋಸ ಮಾಡಬಾರೆಂದು ನೀತಿ ಕಥೆ ಹೇಳುವುದರ  ಮೂಲಕ  ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು,
ಆದಕಾರಣ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿನ ಕಡೆಗೆ ಗಮನ ಕೊಡಬೇಕೆಂದು ಹೇಳಿದರು. ನಂತರ ವೇದಿಕೆ ಮೇಲಿರುವ ಗಣ್ಯರು ಹಾಗೂ ಇನ್ನಿತರ ಗಣ್ಯರು 250  ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. ಬಂದಂತಹ ಮುಖ್ಯ ಅತಿಥಿಗಳಾದ ಶ್ರೀಮತಿ ಡಾ:ಅರುಣಾ ಕಾಮಿನೇನಿ, ಶ್ರೀಮತಿ ಸುಂಕಾ ಚಂದ್ರಿಕಾ, ಇವರಿಗೆ ಮಹಿಳಾ ಉದ್ಯಮಿ ಪ್ರಶಸ್ತಿ  ಬಂದ ಕಾರಣ ಸಂಸ್ಥೆವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ನಾಗಳ್ಳಿ ರಮೇಶ್, ಚೇರ್ಮನ್,ವಂದನಾರ್ಪಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಎ.ಮಂಜುನಾಥ, ಉಪಾದ್ಯಾಕ್ಷರು, ಕೆ.ಸಿ.ಸುರೇಶಬಾಬು,ಉಪಾದ್ಯಾಕ್ಷರು. ಎಸ್.ದೊಡ್ಡನಗೌಡ, ಜಂಟಿ ಕಾರ್ಯದರ್ಶಿಗಳು, ಕೃಷ್ಣಕಾಂತ್, ಶ್ರೀ ವೇಣುಗೋಪಾಲ ಗುಪ್ತಾ ಉಪಸ್ಥಿತರಿದ್ದರು. ಸುಮಾರ 550 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.