ಹೊಸ ಕೋಚ್‌ಗಾಗಿ ಬಿಸಿಸಿಐ ಅರ್ಜಿ ಆಹ್ವಾನ


ನವದೆಹಲಿ.ಮೇ.೧೦- ಭಾರತ ಪುರುಷರ ಕ್ರಿಕೆಟ್ ತಂಡಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಶೀಘ್ರದಲ್ಲೆ ನೂತನ ಕೋಚ್ ಅನ್ನ ಆಯ್ಕೆ ಮಾಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಸದ್ಯ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅವಧಿ ಟಿ೨೦ ವಿಶ್ವಕಪ್ ಬಳಿಕ ಮುಗಿದು ಹೋಗಲಿದೆ.
ಹೀಗಾಗಿ ಮುಂಬರುವ ದಿನಗಳಲ್ಲಿ ಹೋಸ್ ಕೋಚ್‌ಗಾಗಿ ಹುಡುಕಾಟ ನಡೆಯುತ್ತಿದೆ. ಕೋಚ್ ರಾಹುಲ್ ದ್ರಾವಿಡ್ ಅವರು ತಂಡದ ಕೋಚ್ ಆಗಲು ಮರು ಅರ್ಜಿ ಹಾಕಬಹುದು. ಮಾನದಂಡಗಳಲ್ಲಿ ತಿಳಿಸಿದ್ದೇವೆ. ಕ್ರಿಕೆಟ್ ಸಲಹಾ ಸಮಿತಿಯ ಸಲಹೆ ಪಡೆದು ಸಹಾಯಕೋಚ್‌ಗಳಿಗಾಗಿ ಕೂಡ ಅರ್ಜಿ ಆಹ್ವಾನಿಸಲಿವೆ.
ಕೋಚ್‌ಗಳ ಅವಧಿ ಮೂರು ವರ್ಷ ಆಗಿರುತ್ತದೆ ಎಂದು ಜಯ್ ಶಾ ತಿಳಿಸಿದ್ದಾರೆ.
ಯಾರೆಲ್ಲಾ ಐಪಿಎಲ್ ಪ್ಲೇಆಫ್‌ಗೆ ಅರ್ಹರಾಗಿರುವುದಿಲ್ಲವೋ ಆ ಆಟಗಾರರು ಎರಡು ತಂಡಗಳಾಗಿ ಟಿ೨೦ ವಿಶ್ವಕಪ್‌ಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.