ಹೊಸ ಕುಂದವಾಡದಲ್ಲಿ ನಂದಿನಿ ಉತ್ಪನ್ನಗಳ ಅರಿವು ಕಾರ್ಯಕ್ರಮ

ದಾವಣಗೆರೆ.ಜು.೨೨; ಸಮೀಪದ ಹೊಸ ಕುಂದುವಾಡದಲ್ಲಿ ನಂದಿನಿ ಉತ್ಪನ್ನಗಳ ಅರಿವು ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಬಡ್ತಿ ಮುಖ್ಯ ಶಿಕ್ಷಕ ಸಿದ್ದಪ್ಪ ನಂದಿನಿ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.ಹನುಮಂತಪ್ಪ, ಸತೀಶ್,ಕೆಎಂಎಫ್ ತಂಡದವರು ಹಾಜರಿದ್ದರು. ಶಿಕ್ಷಕರಾದ ಮೋಹನ್ ಕುಮಾರ್, ಲಕ್ಷ್ಮೀ, ದಿವ್ಯ ಭಾರತಿ, ನಿಂಗಮ್ಮ, ಸಮೀರಾ ಬಾನು, ರಾಘವೇಂದ್ರ ಕುಮಾರ್, ಮಲ್ಲಿಕಾರ್ಜುನಪ್ಪ, ಭಾಗ್ಯಮ್ಮ ಹಾಗೂ ನಂದಿನಿ ಹಾಲಿನ ಸಗಟು ಮಾರಾಟಗಾರರು, ವಿದ್ಯಾರ್ಥಿಗಳು ಹಾಜರಿದ್ದರು.ಮಕ್ಕಳಿಗೆ ನಂದಿನಿ ಕುಕ್ಕೀಸ್, , ಬಾದಾಮಿ ಹಾಲು, ಸಿಹಿಯನ್ನು ವಿತರಿಸಲಾಯಿತು.ಕೆಎಂಎಫ್ ನಿರ್ದೇಶಕ ಮಂಜುನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು. ಪೂಜಾರ್ ಮಂಜುನಾಥ್ ಉತ್ಪನ್ನಗಳ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಭಾಗ್ಯಮ್ಮ ನಿರೂಪಿಸಿದರು.