ಹೊಸ ಕಾರು ಖರೀದಿಸಿದ ರಣಬೀರ್

ಮುಂಬೈ, ಅ.೧೮-ನಟ ರಣಬೀರ್ ಕಪೂರ್ ಎಂದ ಕೂಡಲೇ ಸಾಕಷ್ಟು ಸುದ್ದಿಗಳು ಮತ್ತು ಸಿನಿಮಾಗಳು ನೆನಪಿಗೆ ಬರುತ್ತವೆ. ಪತ್ನಿ ಆಲಿಯಾ ಭಟ್‌ಗೆ ಇತ್ತೀಚೆಗೆ ನಿಮ್ಮ ಲಿಪ್‌ಸ್ಟಿಕ್ ನಿಮ್ಮ ತುಟಿಗಳಿಂದ ತೆಗೆಯಿರಿ, ನಿಮ್ಮ ತುಟಿಗಳು ನೈಸರ್ಗಿಕವಾಗಿದ್ದರೆ ನೀವು ಸಹಜ ಸುಂದರಿಯಾಗಿ ಕಂಗೊಳಿಸುತ್ತೀರಿ ಎಂದು ಹೇಳಿಕೆ ನೀಡಿದ್ದರು. ಬಾಲಿವುಡ್‌ನಲ್ಲಿ ಯಾವಾಗಲೂ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಇದೀಗ ಬಾಲಿವುಡ್ ನಟ ರಣಬೀರ್ ಕಪೂರ್ ತಮ್ಮ ಕಾರ್ ಬಾರ್ ನಿಂದಾಗಿ ಸುದ್ದಿಯಲ್ಲಿದ್ದಾರೆ.
ಏನು ಸುದ್ದಿ ಎಂದರೆ ಅವರ ದುಬಾರಿ ಕಾರ್ ಕ್ರೇಜ್ ಬಗ್ಗೆ ಈ ಸುದ್ದಿ. ಇತ್ತೀಚೆಗಷ್ಟೇ ರಣಬೀರ್ ಕಪೂರ್ ಮನೆಗೆ ಐಷಾರಾಮಿ ಹೊಸ ಕಾರು ಬಂದಿತ್ತು. ಅದರ ಹೆಸರು ಲ್ಯಾಂಡ್ ರೋವರ್. ರಣಬೀರ್ ಕಪೂರ್ ಹೊಸ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ಮನೆಗೆ ಬಂದಿರುವ ಈ ಹೊಸ ಕಾರಿನ ಬೆಲೆ ೪ ಕೋಟಿ ರೂಪಾಯಿ.ನಟ ರಣಬೀರ್ ಕಪೂರ್ ಖರೀದಿಸಿರುವ ಸಿಲ್ವರ್ ಬಣ್ಣದ ಹೊಸ ಕಾರಿಗೆ ಪೂಜೆ ಮಾಡಿಸಿದ ರಣಬೀರ್ ಕಪೂರ್, ಮುಂಬೈನಲ್ಲಿ ಸಿಟಿ ರೌಂಡ್ಸ್ ಹಾಕಿದ್ದಾರೆ.
ಬಾಲಿವುಡ್ ನಟ ರಣಬೀರ್ ಕಪೂರ್ ತಮ್ಮ ಕಾರು ಸಂಗ್ರಹಕ್ಕೆ ಹೊಸ ರೇಂಜ್ ರೋವರ್ ಕಾರನ್ನು ಸೇರಿಸಿದ್ದಾರೆ. ಈಗಾಗಲೇ ಅವರ ಬಳಿ ಎರಡು ರೇಂಜ್ ರೋವರ್ ಕಾರುಗಳಿವೆ. ಇದೀಗ ಹೊಸ ರೇಂಜ್ ರೋವರ್ ಖರೀದಿ ಮಾಡಿದ್ದಾರೆ.ಈ ಐಷಾರಾಮಿ ಕಾರಿನ ಆರಂಭಿಕ ಬೆಲೆ ೨.೩೮ ಕೋಟಿ ರೂ. ಕಂಪನಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಇದೇ ಲ್ಯಾಂಡ್ ರೋವರ್‌ನ ಐದನೇ ತಲೆಮಾರಿನ ಕಾರನ್ನು ಪರಿಚಯಿಸಿತ್ತು. ಇದರ ಬೆಲೆ ೩.೪೩ ಕೋಟಿ ರೂ.ಗಳಾಗಿದ್ದು, ಇದು ಎಕ್ಸ್ ಶೋ ರೂಂ ಬೆಲೆ ಮತ್ತು ೪ ಕೋಟಿ ರೂ.ಗಳ ಆನ್ ರೋಡ್ ಬೆಲೆಗಿಂತ ಹೆಚ್ಚಾಗಿದೆ. ಅದೇ ಆವೃತ್ತಿಯನ್ನು ರಣಬೀರ್ ಕಪೂರ್ ಖರೀದಿಸಿದ್ದಾರೆ.