ಹೊಸ ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣೆ

ಮಂಡ್ಯ.ಮಾ.28:- ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ 117 ಕಂದಾಯ ಗ್ರಾಮಗಳ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ವಿತರಣಾ ಮಾಡಿದರು.
ಅವರು ಇಂದು ಜಿಲ್ಲಾಡಳಿತ ವತಿಯಿಂದ ಹೊಸ ಕಂದಾಯ ಗ್ರಾಮಗಳಲ್ಲಿನ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಕಲಾಮಂದಿರದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.
ಹೊಸ ಕಂದಾಯ ಗ್ರಾಮಗಳ ರಚನೆಯಿಂದ ಗ್ರಾಮಸ್ಥಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ, ರಸ್ತೆ, ಶಾಲೆಗಳು ಸೇರಿದಂತೆ ಇನ್ನಿತರ ಸೌಕರ್ಯ ಸಿಗಲಿದ್ದು, ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲಿದ್ದಾರೆ ಎಂದರು.
ಜಮೀನು ಅಥವಾ ನಿವೇಶನಗಳಲ್ಲಿ ವಾಸ ಮಾಡುತ್ತಿರುವವರು ಸರ್ಕಾರದ ದಾಖಲೆಗಳನ್ನ ಪಡೆದುಕೊಂಡಿದ್ದೆ ಆದಲ್ಲಿ ಅದರ ಮಾಲಿಕತ್ವವನ್ನ ನಿಖರವಾಗಿ ಗುರುತಿಸಿಕೊಂಡು ದಾಖಲೆಯನ್ನು ಇಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಬಹಳ ಸಹಾಯವಾಗುತ್ತದೆ ಹಾಗೂ ಮುಂದಿನ ಪೀಳಿಗೆಗೆ ವರ್ಗವಣೆ ಮಾಡುವುದಕ್ಕೂ ಅನುಕೂಲವಾಗುತ್ತದೆ ಎಂದರು.
ಕಂದಾಯ ಇಲಾಖೆಯು ನೇರವಾಗಿ ಸಾರ್ವಜನಿಕರೊಂದಿಗೆ ಸಂಪರ್ಕವಿರುವ ಇಲಾಖೆಯಾಗಿದ್ದು, ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ಮಾತನಾಡಿ ಕಂದಾಯ ಗ್ರಾಮ ರಚನಾ ಕೋಶ ಸ್ಥಾಪನೆಯ ಪರಿಣಾಮ ದಾಖಲೆ ರಹಿತ ಇದ್ದ ಗ್ರಾಮಗಳ ರಚನೆಯಾಗಿದೆ, ಮಂಡ್ಯ ಜಿಲ್ಲೆಯಲ್ಲಿ 117 ಹೊಸ ಗ್ರಾಮಗಳ ರಚನೆಯಾಗಿದ್ದು, ಎಲ್ಲರಿಗೂ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳು ಸಿಗಲಿವೆ ಎಂದರು.
ಹೊಸ ಕಂದಾಯ ಗ್ರಾಮದಲ್ಲಿ ಹಕ್ಕುದಾರರಿಗೆ ಹಕ್ಕು ಪತ್ರ ನೀಡಲು ಇಂದು ರಾಜ್ಯದಾದ್ಯಂತ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಮಾನ್ಯ ಪ್ರಧಾನಮಂತ್ರಿ ಅವರು ಮಂಡ್ಯ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಮಾಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನ, ತಹಶಿಲ್ದಾರ್ ವಿಜಯಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.