ಹೊಸ ಆಲೋಚನೆಯ ಪ್ರಜಾರಾಜ್ಯ ಸದ್ದಿಲ್ಲದೆ ಪೂರ್ಣ

* ಚಿ.ಗೋ ರಮೇಶ್

ವೃತ್ತಿಯಲ್ಲಿ ನ್ಯೂರೋ ಸರ್ಜನ್ ಆಗಿರುವ ಡಾ. ವರದರಾಜ್  ಚಿತ್ರರಂಗದಲ್ಲಿ ಹೊಸ ಆಲೋಚನೆಯೊಂದಿಗೆ ಹೊಸತನದ ಹೆಗ್ಗುರುತು ಮೂಡಿಸಲು ಮುಂದಾಗಿದ್ದಾರೆ.

ಅದುವೇ “ಪ್ರಜಾರಾಜ್ಯ” ಚಿತ್ರದ ಮೂಲಕ.‌ಚಿತ್ರಕ್ಕೆ ಬಂಡವಾಳ ಹಾಕುವ ಜೊತೆಗೆ ಕಥೆ, ಚಿತ್ರಕತೆ ಸಂಭಾಷಣೆಯನ್ನೂ ಬರೆದಿದ್ದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಬೆನ್ನೆಲುಬಾಗಿ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ, ಹಿರಿಯ ನಟ ದೇವರಾಜ್, ಸುಧಾರಾಣಿ, ಸುಧಾ ಬೆಳವಾಡಿ, ತಬಲ‌ನಾಣಿ, ಸಂಪತ್ ಮೈತ್ರೇಯಾ ಸೇರಿದಂತೆ ಹಲವು ಮಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟ್ರೈಲರ್ ಬಿಡುಗಡೆಗೂ ಮುನ್ನ ಮಾಹಿತಿ ಹಂಚಿಕೊಂಡ ನಿರ್ಮಾಪಕ ಡಾ.  ವರದರಾಜ್, ಚಿತ್ರ ಮಾಡಲು ನಟ ಉಪೇಂದ್ರ ಮೂಲ ಪ್ರೇರಣೆ. ಅವರ ಚಿತ್ರ ನೋಡಿ ನಾನು ಯಾಕೆ ಈ ರೀತಿಯ ಸಿನಿಮಾ‌ ಮಾಡಬಾರದು ಎಂದು ಅಂದುಕೊಂಡಾಗ ಹೊಳೆದ ಚಿತ್ರವೇ ” ಪ್ರಜಾರಾಜ್ಯ”.

ಎಲ್ಲಾ ವರ್ಗದ ಮಂದಿಯನ್ನು ಪ್ರತಿನಿಧಿಸುವ ಪಾತ್ರಗಳು ಚಿತ್ರದಲ್ಲಿವೆ. ಈ ಚಿತ್ರದ ಮೂಲಕ ಆರೋಗ್ಯ, ಶಿಕ್ಷಣ, ವಸತಿ, ಆಹಾರ ಎಲ್ಲರಿಗೂ ಸಿಗಬೇಕು ಎನ್ನುವ ಕಲ್ಪನೆಯನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.

ಇದು ಸಿಗಸಿದ್ದರೆ ಮುಂದೆ ಏನು ಮಾಡಬೇಕು ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಸಂವಿಧಾನಲ್ಲಿ ಶಿಕ್ಷಣದ ಹಕ್ಕು ಕಲ್ಪಿಸಲಾಗಿದೆ.ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಲ್ಲ. ಹೀಗಾಗಿ ಸಾವಿರಕ್ಕೆ ಮತ ಮಾರಿಕೊಳ್ಳದೆ. ಉಚಿತ ಆರೋಗ್ಯ ಕಲ್ಪಿಸಿ ಮತ ಹಾಕುತ್ತೇವೆ ಎನ್ನುವುದನ್ನು ಹೇಳಿ ಎನ್ನುವ ಜಾಗೃತಿ ಮೂಡಿಸುವ ಪ್ರಯತ್ನ ಎಂದರು.

ಹಿರಿಯ ನಿರ್ದೇಶಕ ನಾಗಾಭರಣ ಅವರನ್ನು ಭೇಟಿ

 ಮಾಡಿದಾಗ  ಚಿತ್ರ ಗೆಲ್ಲುತ್ತೆ, ಬದಲಾವಣೆ ಆಗುತ್ತೆ ಅಂತ ಮಾಡಬೇಡ ಅಂತ , ನಿನ್ನ ಪ್ರಯತ್ನ‌‌ ನೀನು ಮಾಡು ಎನ್ನುವ ಸಲಹೆ ನೀಡಿದರು.ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ‌ ಮಾಡಲಾಗಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ ಎಂದರು.

ಈ ಸಿನಿಮಾ ಯಾವುದೇ ಪಕ್ಷ, ಸರ್ಕಾರದ ವಿರುದ್ದ ಅಲ್ಲ.ಬದಲಾಗಿ ಜನರಿಗಾಗಿ ಮಾಡಿದ ಸಿನಿಮಾ ಎಂದು ಸ್ಪಷ್ಟಪಡಿಸಿದರು. ಹಿರಿಯ ನಿರ್ದೇಶಕ ನಾಗಾಭರಣ,ಚಿತ್ರದಲ್ಲಿ ನನ್ನದು ರೈತನ ಪಾತ್ರ. ಚಿತ್ರದ ಮೂಲಕ ಸಂದೇಶವನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಲ್ಲರಿಗೂ ಇಷ್ಟವಾಗಲಿದೆ ಎಂದರು.

ನಿರ್ದೇಶಕ ವಿಜಯ್ ಭಾರ್ಗವ್ , ಮೊದಲ ಚಿತ್ರದಲ್ಲಿ ಅನುಭವಿ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು‌ ಖುಷಿ‌ ಹಂಚಿಕೊಂಡರು. ತಬಲ‌ ನಾಣಿ ಮಾತನಾಡಿ ಆಟೋ ಚಾಲಕನ ಪಾತ್ರ. ರಾಜಕಾರಣಿಗಳಿಗೆ  ಸಮಸ್ಯೆ ಹೇಳಿ ಅದರ ಪರಿಹಾರಕ್ಕೆ ಒತ್ತಾಯ ಮಾಡುವ ಪಾತ್ರ ಎಂದರು.

ವಿಜೇತ ಮಂಜಯ್ಯ ಸಂಗೀತ ಚಿತ್ರಕ್ಕಿದೆ.