ಮೂರು ದಶಕಗಳ ಹಿಂದೆ ’ರಾಜರಾಣಿ’ ಎನ್ನುವ ಸಿನಿಮಾ ತೆರೆಕಂಡಿತ್ತು. ಈಗ ಇದೇ ಹೆಸರಿನಲ್ಲಿ ಚಿತ್ರ ಸಿದ್ದಗೊಂಡಿದೆ. ’ಇಟ್ಟಿಗೆ ಗೂಡಿನಲ್ಲಿ ರಾಜರಾಣಿ’ ಎಂಬ ಅಡಿಬರಹವಿದೆ.
ಬಳ್ಳಾರಿ ಮೂಲದ ರಣಧೀರ್ ಮೂಲತ: ಫೋಟೋಗ್ರಾಫರ್. ಕಿರುಚಿತ್ರಕ್ಕೆ ನಟಿಸುವ ಅವಕಾಶ ಸಿಕ್ಕಿ ಅವಮಾನವಾಗಿದೆ. ಇದನ್ನೆ ಸವಾಲಾಗಿ ತೆಗೆದುಕೊಂಡಿದ್ದರಿಂದಲೇ ಮುಂದೆ ’ಪುದಿಯವರುಗಳ್’ ತಮಿಳು ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾದರು. ನಂತರ ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಸಿದ್ದಾರೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ರಚನೆ,ಚಿತ್ರಕಥೆ, ನಿರ್ದೇಶನ ಜತೆಗೆ ನಾಯಕನಾಗಿ ಬಣ್ಣ ಹಚ್ಚಿದ್ದಾರೆ.
ವಿಜಯ್‌ಬಳ್ಳಾರಿ ಮತ್ತು ನೇತ್ರಾವತಿ ಮಲ್ಲೇಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಮಧುಸುದನ್, ಲೀಲಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಕಾಲ್ಪನಿಕ ಕಥೆಯು ಇಬ್ಬರು ನಾಯಕರುಗಳ ನಡುವೆ ಕಾಣೆಯಾದ ನಾಯಕಿಯ ಸುತ್ತ ನಡೆಯಲಿದೆ. ಸೆಸ್ಪೆನ್ಸ್ ಹಾಗೂ ಪ್ರೀತಿಯನ್ನು ಒಳಗೊಂಡ ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ. ಕಾಣೆಯಾದ ನಾಯಕಿಯು ಯಾರಿಗೆ ಒಲಿಯುತ್ತಾಳೆ ಎನ್ನುವ ನಿಗೂಢ ಅಂಶಗಳು ಇರಲಿದೆ.
ಮಂಡ್ಯ ಕಡೆಯ ರಿತನ್ಯಶೆಟ್ಟಿ ನಾಯಕಿ. ಜೀವನ್ ಉಪನಾಯಕ. ಉಳಿದಂತೆ ಗಿರಿಜಾಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್‌ವೆಂಕಟೇಶ್, ಗಿರೀಶ್‌ಜತ್ತಿ, ಮಂಜುಳಾನಾಯ್ಡು, ಚಂದ್ರಪ್ರಭ ಮುಂತಾದವರು ನಟಿಸಿದ್ದಾರೆ. ಸಂಗೀತ ಸುಧನ್‌ಪ್ರಕಾಶ್. ಐದು ಹಾಡುಗಳ ಪೈಕಿ ಒಂದು ಗೀತೆಗೆ ರವಿತಪಸ್ವಿ ಸಾಹಿತ್ಯ ರಚಿಸಿದ್ದಾರೆ. ಛಾಯಾಗ್ರಹಣ ಮಧು, ಚಿತ್ರವನ್ನು ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಕೋಲಾರ, ಮಾಲೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಚಿತ್ರ ಹೋಗಲಿದೆ.