ಹೊಸೂರು : ಸಾಮಾನ್ಯ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ

ರಾಯಚೂರು.ನ.೧೪- ತಾಲೂಕಿನ ಹೊಸೂರು ವಲಯದ ಹೊಸೂರು ಕಾರ್ಯಕ್ಷೇತ್ರದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಉದ್ಘಾಟನ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ಸಂತೋಷ್ ಕುಮಾರ್ ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ ಹೆಚ್.ಆರ್.ಶಿವಾನಂದ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ನಿರ್ದೇಶಕರು ಯೋಜನೇಯ ಕಾರ್ಯಕ್ರಮಗಳ ಕುರಿತು ಸಾಮಾನ್ಯ ಸೇವಾ ಕೇಂದ್ರದಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ತಿಳಿಸಿದರು. ಸಮಾಜ ಸೇವಕರಾದ ಬಸವರಾಜ್ ಅವರು ಮಾತನಾಡಿ, ಕ್ಷೇತ್ರದ ಸೇವೇಗಳು ಶ್ಲಾಘನೀಯವಾಗಿದ್ದು, ಗ್ರಾಮದ ಸದಸ್ಯರಿಗೆ, ಅಸಹಾಯಕರಿಗೆ ಅನುಕೂಲ ಮಾಡಿಕೊಡುತ್ತಿರುವುದು ಉತ್ತಮವಾಗಿದೆಂದರು. ಈ ಸಂದರ್ಭದಲ್ಲಿ ಬುಜ್ಜಮ್ಮ ಶಂಕ್ರಪ್ಪ ನಗರಸಭೆ ಉಪಾಧ್ಯಕ್ಷಕರು, ರಾಮಸ್ವಾಮಿ ವಕೀಲರು, ಶಿವರಾಜ್ ಯಾದವ್ ಉರಿನ ಗಣ್ಯರು, ಬಸವರಾಜ್ ಊರಿನ ಗಣ್ಯರು ಹಾಗೂ ಶಾರದಮ್ಮ ಒಕ್ಕೂಟದ ಅಧ್ಯಕ್ಷರು ಹಾಗೂ ತಾಲೂಕಿನ ನೋಡಲ್ ಅಧಿಕಾರಿ ನಾಗಯ್ಯ, ವಲಯದ ಮೇಲ್ವಿಚಾರಕರಾದ ವಿಜಯಲಕ್ಷ್ಮೀ, ನೂತನ ಮೇಲ್ವಿಚಾರಕರಾದ ಶರಣಮ್ಮ, ಸಿಎಸ್‌ಸಿ ಸಹಾಯಕಿ ಅನಿತಾ, ಸುವಿಧಾ, ಉಮಾದೇವಿ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಯವರಾದ ಲಕ್ಷ್ಮೀದೇವಿ, ನರಸಮ್ಮ ಮತ್ತು ಹೊಸೂರು ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.