ಹೊಸಹಳ್ಳಿ ಪೋಲೀಸರ ದಾಳಿ -ಗಾಂಜಾ ಗಿಡ ಜಪ್ತಿ, ಆರೋಪಿ ಬಂಧನ.

ಕೂಡ್ಲಿಗಿ.ನ. 03:- ಸೇವಂತಿ ಹೂ ಬೆಳೆದ ಹೊಲದಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ತಿಳಿದು ಖಚಿತ ಮಾಹಿತಿ ಆಧಾರಿಸಿದ ಹೊಸಹಳ್ಳಿ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳು ಜಪ್ತಿ ಮಾಡಿ ಹಾಗೂ ಬೆಳೆದ ಆರೋಪಿಯನ್ನ ಬಂಧಿಸಿರುವ ಘಟನೆ ಕನ್ನಬೋರಯ್ಯನಹಟ್ಟಿಲಿ ಸೋಮವಾರ ಸಂಜೆ ಜರುಗಿದೆ.
ಆರೋಪಿ ಪಾಲಯ್ಯ ನು ತಮ್ಮ ಕುಲಸ್ಥರಾದ ಓಬಮ್ಮರ ಪೂಜಾರಹಳ್ಳಿ ಕಂದಾಯ ಗ್ರಾಮದ ಕೆ. ಬಿ. ಹಟ್ಟಿಯ ಸರ್ವೇ ನಂಬರ್ 151/ಎ /3 ನೇದ್ದರ ಜಮೀನಿನಲ್ಲಿ ಸೇವಂತಿ ಹೂ ಬೆಳೆದಿದ್ದು ಅದರ ಮಧ್ಯದಲ್ಲಿ 4ಗಾಂಜಾ ಗಿಡ ಯಾವುದೇ ಪರವಾನಿಗೆ ಇಲ್ಲದೆ ಬೆಳೆದಿದ್ದು ಮಾಹಿತಿ ಆಧಾರಿಸಿದ ಹೊಸಹಳ್ಳಿ ಪಿಎಸ್ಐ ನಾಗರಾಜ ತಮ್ಮ ಸಿಬ್ಬಂದಿಯೊಂದಿಗೆ ಸೋಮವಾರ ಸಂಜೆ ದಾಳಿ ನಡೆಸಿ ಪಂಚರ ಸಮಕ್ಷಮ ಗಾಂಜಾ ಗಿಡಗಳನ್ನು ಜಪ್ತಿಗೊಳಿಸಿ ಆರೋಪಿ ಪಾಲಯ್ಯನನ್ನು ಬಂಧಿಸಿದ್ದು ಹೊಲದ ಮಾಲೀಕರಾದ ಓಬಮ್ಮಳು ತಲೆಮರೆಸಿಕೊಂಡಿದ್ದಾಳೆ ಇಬ್ಬರು ಆರೋಪಿಗಳ ವಿರುದ್ಧ ಸರ್ಕಾರದ ಪರವಾಗಿ ಹೊಸಹಳ್ಳಿ ಪಿಎಸ್ಐ ನಾಗರಾಜ ನೀಡಿದ ದೂರಿನಂತೆ ಮಹಿಳಾ ಪಿಎಸ್ಐ ನಾಗರತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ