ಹೊಸವರ್ಷ ಆಚರಣೆ ನಿರ್ಬಂಧದ ಹಿಂದೆ ಆರ್.ಎಸ್.ಎಸ್. ಕೈವಾಡ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ

ಶಿವಮೊಗ್ಗ, ಡಿ. 28: ರಾಜ್ಯ ಸರ್ಕಾರದ ಹೊಸ ವರ್ಷ ಆಚರಣೆ ನಿರ್ಬಂಧದ ಹಿಂದೆ  ಆರ್.ಎಸ್.ಎಸ್ ನ ಹಿಡನ್ ಅಜೆಂಡಾವಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಆರೋಪಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಯುವಪೀಳಿಗೆಯ ಸಂತೋಷ ಸಂಭ್ರಮದ ಕ್ಷಣವನ್ನ ಕಸಿದುಕೊಳ್ಳುವ ಹಕ್ಕು ಸರ್ಕಾರಕ್ಕಿಲ್ಲ. ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಾಗ ಸಂಭ್ರಮಾಚರಣೆ ಮಾಡುವ ದಿನದಂದು 20 ಸಾವಿರ ಜನ ಸೇರಿಸಿ ಆಚರಿಸಲಾಯಿತು. ಖುದ್ದು ಸಿಎಂ‌ ಅವರೇ ಆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಇಲ್ಲಿ ಯಾಕೆ ಆ ನಿರ್ಬಂಧವೆಸಗಲಿಲ್ಲ ಎಂದು ಪ್ರಶ್ನಿಸಿದರು.
ಹೊಸ ವರ್ಷ ಆಚರಣೆಗೆ ಬಿಜೆಪಿ ಸರ್ಕಾರ ನಿರ್ಬಂಧ ಹೇರಿರುವ ಹಿಂದೆ ಆರ್.ಎಸ್.ಎಸ್. ಪಿತೂರಿ ಇದೆ. ಪಿತೂರಿಗೆ ಕಾರಣ ಆರ್.ಎಸ್.ಎಸ್. ಗೆ ಕ್ರಿಶ್ಚನ್ ಸಮುದಾಯದ ಆಚರಣೆ ಬಗ್ಗೆ ವಿಶ್ಚಾಸವಿಲ್ಲವೆಂದು ದೂರಿದರು.
ಸಾಮಾಜಿಕ ಅಂತರ ಮತ್ತು ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿ  ಯುವಕರ ವರ್ಷದ ಆಚರಣೆ ನಡೆಸಲು ಅನುಮತಿ ನೀಡಬೇಕು ಎಂದು ಅಗ್ರಹಿಸಿದರು.