“ಹೊಸವರುಷ – ಮಕ್ಕಳ ಹರುಷ” ಕಾರ್ಯಕ್ರಮ ಜ.3 ರಂದು ಪ್ರಸಾರ

ಕಲಬುರಗಿ.ಜ.01:ಕಲಬುರಗಿ ಆಕಾಶವಾಣಿ ಕೇಂದ್ರದ ಬಾಲಲೋಕ ಕಾರ್ಯಕ್ರಮದಲ್ಲಿ ಜ. 3 ರಂದು ಬೆಳಿಗ್ಗೆ 9.35ಕ್ಕೆ “ಹೊಸ ವರುಷ – ಮಕ್ಕಳ ಹರುಷ” 2021 ಹೊಸ ವರ್ಷವನ್ನು ಸ್ವಾಗತಿಸುವ ಮಕ್ಕಳ ನಿರೀಕ್ಷೆ ಕುರಿತು ವಿಶೇಷ ಕಾರ್ಯಕ್ರಮ ಬಿತ್ತರಗೊಳ್ಳಲಿದೆ.
ಮಕ್ಕಳು ಹೊಸ ವರುಷದ ಬಗ್ಗೆ ಇಟ್ಟ ಕನಸುಗಳನ್ನು ಮುಕ್ತವಾಗಿ ಹಂಚಿಕೊಂಡ ಈ ಕಾರ್ಯಕ್ರಮದಲ್ಲಿ ಕಲಬುರಗಿಯ ಸ್ಪೂರ್ತಿ, ಭೂಮಿಕಾ, ಶ್ರೇಯಸ್, ನಿತಿನ್, ಚಿತಾಪುರ ತಾಲೂಕು ರಾವೂರಿನ ಕೃಷ್ಣ, ಚೈತನ್ಯ ,ಬಂದರವಾಡ ಶಾಲೆಯ ಜೋಹಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಕಾರ್ಯಕ್ರಮವನ್ನು ಡಾ.ಸದಾನಂದ ಪೆರ್ಲ ನಿರ್ಮಾಣ ಮಾಡಿದ್ದು, ಮಲ್ಲಮ್ಮ ಟಿ.ಬುಳ್ಳಾ ಸಂಕಲನ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಮೊಬೈಲïನ news on air ಆ್ಯಪ್ ಮೂಲಕವೂ
ಕೇಳಬಹುದು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.