ಹೊಸಳ್ಳಿಯಲ್ಲಿ ಮನರಂಜಿಸಿದ ರೇಣುಕಾ ಕಲ್ಯಾಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.14: ಜಿಲ್ಲೆಯ ಸಿರುಗುಪ್ಪ ತಾಲೂಕಿನ  ಎಚ್. ಹೊಸಹಳ್ಳಿ ಗ್ರಾಮದಲ್ಲಿ ಸೆ.12 ರಂದು ಪ್ರದರ್ಶನಗೊಂಡ ರೇಣುಕಾ ಕಲ್ಯಾಣ ಭಾಗ 2 ಎಂಬ ಬಯಲಾಟ ನೆರೆದ ಸುತ್ತಮುತ್ತಲ ಗ್ರಾಮಗಳ ನೂರಾರು  ಪ್ರೇಕ್ಷಕರ  ಮನ ರಂಜಿಸಿತು.
ಶ್ರೀ ಬಸವೇಶ್ವರ ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್  ಇವರಿಂದ  ಈ ಬಯಲಾಟ ಶ್ರೀಶೈಲಪ್ಪ, ಕವಿ ಗಾಳಿ ಮಲ್ಲಯ್ಯ, ಗಂಜಿ ಮಂಜುನಾಥ ಮತ್ತು ಊರಿನ ರೈತ ಬಾಂಧವರ ನೇತೃತ್ವದಲ್ಲಿ ಪ್ರದರ್ಶನ ಗೊಂಡಿತು.
ಹಾರ್ಮೋನಿಯಂ ಹಾಗು ಮಾಸ್ಟರ್ ರುದ್ರಪ್ಪ ನಿಟ್ಟರವಟ್ಟಿ,  ಮದ್ದಲೆ ಎರಿನಾಗೇಶ, ಪ್ಯಾಡ್ ನಾಗಲಿಂಗ, ಸಾರಥಿಯಾಗಿ ಯಲ್ಲಪ್ಪ ಕೊಳಗಲ್,  ಮುಮ್ಮೇಳ ದಾಸಪುರರದ ತಂಡ,   ಗೀತಾ ರೇಣುಕಾ ದೇವಿಯಾಗಿ,  ವೈಟ್ ಸುಮಾ ಮೇನಕಳಾಗಿ, ಮಂಜುಳಾ ವೇದಾವತಿಯಾಗಿ ನಟಿಸಿದರು.
 ಬೂದುಗುಪ್ಪದ ಶ್ರೀಬಸವೇಶ್ವರ ರಂಗಸಜ್ಜಿಕೆ ಮತ್ತು ಸೀನರಿ,   ವರ್ಣಾಲಂಕಾರ ಮತ್ತು‌ ಮೇಕಪ್  ಗಂಗಾಧರ ಸಾಹುಕಾರ್, ವಿಶ್ವನಾಥ ಸಾಹುಕಾರ್  ಇವರಿಂದ ನೆರವೇರಿತು