ಹೊಸರಾಯಪ್ಪ ಹೇಳಿಕೆಗೆ ಖಂಡನೆ

ಕೋಲಾರ,ಜ.೧೩: ಭಾರತೀಯ ಜನತಾಪಾರ್ಟಿಗೆ ಎಂ.ನಾರಾಯಣಸ್ವಾಮಿ ರವರು ಬಂದರೆ ಅವರಿಗೆ ಘೇರಾವ್ ಹಾಕುವುದಾಗಿ ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹೊಸರಾಯಪ್ಪ ಹೇಳಿಕೆ ನೀಡಿರುವುದನ್ನು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಚೆಲುವನಹಳ್ಳಿ ಹೆಚ್.ಶ್ರೀನಿವಾಸ್ ತೀವ್ರವಾಗಿ ಖಂಡಿಸಿ ಹೊಸರಾಯಪ್ಪನವರು ಮೊದಲು ತಮ್ಮ ಸಾಚಾತನವನ್ನು ಪ್ರಶ್ನಿಸಿಕೊಳ್ಳಲಿ ಎಂದು ತಾಕೀತು ಮಾಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿರುವ ಹೊಸರಾಯಪ್ಪನವರು ತಮ್ಮ ಸಾಚಾತನವನ್ನು ಪ್ರಶ್ನಿಸಿಕೊಳ್ಳಲಿ. ಜಿಲ್ಲೆಯಲ್ಲಿನ ಒಬ್ಬ ಹಿರಿಯ ರಾಜಕಾರಣಿಯ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಹೊಸರಾಯಪ್ಪನವರು ೨೦೧೩ರ ಬಂಗಾರಪೇಟೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಎಂ.ನಾರಾಯಣಸ್ವಾಮಿ ಪರ ಪ್ರಚಾರ ಮಾಡುತ್ತಿದ್ದರು. ಅದೇ ದಿನ ಮಧ್ಯಾಹ್ನ ೨-೦೦ ರಿಂದ ಎಸ್.ಎನ್.ನಾರಾಯಣಸ್ವಾಮಿ ರವರ ಜೊತೆ ಕಾಂಗ್ರೆಸ್ ಸೇರ್ಪಡೆಯಾದರು. ನಂತರದ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿದ್ದ ಹೊಸರಯಪ್ಪನವರು ಎಸ್.ಎನ್.ನಾರಾಯಣಸ್ವಾಮಿ ರವರು ಕಾಂಗ್ರೆಸ್ ಶಾಸಕರಾಗುವ ತನಕ ಅಲ್ಲಿಯೇ ಇದ್ದರು. ಇವರ ವರ್ತನೆಯನ್ನು ಕಂಡು ಎಸ್.ಎನ್ ನಾರಾಯಣಸ್ವಾಮಿಯವರು ಹೊಸರಾಯಪ್ಪನವರನ್ನು ಹೊರಗಿಟ್ಟರು. ಅಲ್ಲಿಂದ ಮತ್ತೆ ಬಿಜೆಪಿ ಸೇರಲು ಹರಸಾಹಸಪಟ್ಟಿದ್ದನ್ನು ಒಂದೊಮ್ಮೆ ನೆನೆಪಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಅಂದು ಬಿಪಿ ವೆಂಕಟಮುನಿಯಪ್ಪ ರವರು ಜಿಲ್ಲಾಧ್ಯಕ್ಷರಾಗಿದ್ದರು. ಇದೇ ಹೊಸ ರಾಯಪ್ಪನವರನ್ನು ಹತ್ತಿರ ಸಹ ಬಿಟ್ಟುಕೊಡಲಿಲ್ಲ. ಪಕ್ಷಕ್ಕೆ ಬೇಡವೆಂದು ಪ್ರತಿರೋಧ ಹೊಡ್ಡಿದ್ದರು. ನೇರವಾಗಿ ಕೆ.ಎಸ್ ಈಶ್ವರಪ್ಪನವರ ಬಳಿ ಹೋಗಿ ಬಿಜೆಪಿ ಶಾಲು ಹಾಕಿಸಿಕೊಂಡು ಮತ್ತು ಬಿಜೆಪಿ ಪಕ್ಷಕ್ಕೆ ಬಂದರು. ಆಗ ಎಂ.ನಾರಾಯಣಸ್ವಾಮಿಯವರು ಜಿಲ್ಲಾಧ್ಯಕ್ಷರಾಗಿದ್ದಂತಹ ಬಿ.ಪಿ ವೆಂಕಟಮುನಿಯಪ್ಪರವರಿಗೆ ಮನವರಿಕೆ ಮಾಡಿ ಪಕ್ಷದ ಸಭೆಗಳಿಗೆ ಕರೆಸಿಕೊಂಡಿರುವ ವಿಚಾರವನ್ನು ಹೊಸರಾಯಪ್ಪ ಮರೆತು ಹೋಗಿದ್ದಾರೆ. ಇದು ಇಡೀ ಜಿಲ್ಲೆಗೆ ಗೊತ್ತಿದೆ. ಎಂ.ನಾರಾಯಣಸ್ವಾಮಿಯವರನ್ನು ಘೇರಾವ್ ಮಾಡುತ್ತೇವೆ ಎಂದು ಹೇಳುವುದರಲ್ಲಿ ಅರ್ಥವಿದೆಯೇ. ನೀವು ಅಂತಹ ಕೃತ್ಯವನ್ನು ಮಾಡಲು ಹೊರಟರೆ ನಿಮ್ಮನ್ನು ಜಿಲ್ಲಾ ಸಭೆಗಳಲ್ಲಿ ನಾವು ಘೇರಾವ್ ಮಾಡಬೇಕಾಗುತ್ತದೆ. ಆ ಪದಗಳನ್ನು ಹಿಂದಕ್ಕೆ ಪಡೆಯಬೇಕು. ಭಾರತೀಯ ಜನತಾಪಾರ್ಟಿ ರಾಷ್ಟ್ರೀಯ ಪಕ್ಷವಾಗಿದ್ದು, ಶಿಸ್ತು ಬದ್ಧ ಪಕ್ಷವಾಗಿದೆ. ಅದು ಒಬ್ಬರ ಸ್ವತ್ತಲ್ಲ. ಕಾರ್ಯಕರ್ತರೆಲ್ಲರೂ ಸೇರಿ ಬೆಳೆಸಿರುವ ಪಕ್ಷ. ಪಕ್ಷಕ್ಕೆ ಬಂದಿರುವ ಹಲವಾರು ಮಹನೀಯರುಗಳು ಯಾವ ಯಾವ ಪಕ್ಷದಿಂದ ಬಂದಿದ್ದಾರೆ ಎಂಬುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಈ ವಿಚಾರ ಕ್ಷೇತ್ರದ ಮತದಾರರಿಗೆ ಗೊತ್ತಿದೆ. ಒಂದು ವರ್ಷದಿಂದ ನಾವು ಗಮನಿಸುತ್ತಿದ್ದೇವೆ. ಪಕ್ಷದ ಸಂಘಟನೆಗೆ ಪೂರಕವಾದ ಹೇಳಿಕೆಗಳನ್ನು ನೀಡಬೇಕೇ ಹೊರತು ಪಕ್ಷಕ್ಕೆ ಮಾರಕವಾಗುವ ಹೇಳಿಕೆಗಳನ್ನು ನೀಡಬಾರದೆಂದು ಹಾಗೂ ಪಕ್ಷದ ಸಂಘಟನೆಗೆ ಒತ್ತು ಕೊಡುವುದನ್ನು ಬಿಟ್ಟು ಘೇರಾವ್ ಮಾಡುತ್ತೇವೆಂಬ ಧಮ್ಕಿ ಪದಗಳನ್ನು ಬಳಸುವುದು ಸೂಕ್ತವಲ್ಲ. ಇದನ್ನು ಮತದಾರರು ಗಮನಿಸುತ್ತಿದ್ದಾರೆ. ಮುಂದೆ ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಚೆಲುವನಹಳ್ಳಿ ಹೆಚ್.ಶ್ರೀನಿವಾಸ್ ಸೂಚಿಸಿದ್ದಾರೆ.