ಹೊಸಬರ `ಹುಲಿಭೇಟೆ’ಗೆ  ಗಣ್ಯರ ಸಾಥ್..

ಯುವ ಉತ್ಸಾಹಿ ತಂಡದ‌ “ಹುಲಿಭೇಟೆ ಚಿತ್ರ ತಯಾರಾಗಿದೆ. ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.  ಚಿತ್ರದ ಟೀಸರ್ ಬಿಡುಗಡೆಗೆ  ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಎಸ್ ಎ ಚಿನ್ನೇಗೌಡ,

ಸಾ.ರಾ.ಗೋವಿಂದು,ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೆ.ಎಂ.ವೀರೇಶ್ ಮುಂತಾದ ಗಣ್ಯರು ಆಗಮಿಸಿ ಶುಭಕೋರಿದರು. ನಿರ್ದೇಶಕ ರಾಜ್ ಬಹದ್ದೂರ್,ಚಿತ್ರ ಆರಂಭಿಸಿದಾಗ ಕೆಲವು ಅಡೆತಡೆಗಳು ಎದುರಾದವು. ಮಕ್ಕಳಿಗೆ ಕಷ್ಟ ಬಂದಾಗ ಮೊದಲು ನೆನಪಾಗುವುದು ತಾಯಿ. ವಾಣಿಜ್ಯ ಮಂಡಳಿ ಹಾಗು ನಿರ್ಮಾಪಕರ ಸಂಘದ  ಸಹಕಾರದಿಂದ ಎದುರಾದ ಕಷ್ಟ ದೂರವಾಗಿದೆ ಎಂದರು.

ಭೂಗತಲೋಕದ ಒಂದಿಷ್ಟು ಕಥೆ ಜೊತೆಗೆ ನವೀರಾದ ಪ್ರೇಮಕಾವ್ಯ ಸಹ ಇದರಲ್ಲಿದೆ.ಕಲ್ಯಾಣ ಕರ್ನಾಟಕದ ಭಾಗದಲ್ಲೇ ಚಿತ್ರೀಕರಣ ನಡೆದಿದೆ . ಮೇ ಅಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿಕೊಂಡರು.

ನಾಯಕ ವಿಶ್ವ ಮಾತನಾಡಿ,ಕ್ಯಾಮೆರಾ ಅಸಿಸ್ಟೆಂಟ್ ಹಾಗೂ ಇನ್ನಿತರ ಕೆಲಸ ಮಾಡಿರುವ ನನಗೆ ನಟನೆಯಲ್ಲಿ ಆಸಕ್ತಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ತಂದೆ-ತಾಯಿಯ ಬೆಂಬಲ ದೊರಕಿತು. ಈ ಸಿನಿಮಾ ಆರಂಭವಾಯಿತು ಎಂದರು.

ನಾಯಕಿ ರೋಹಿಣಿ ಹಾಗೂ ಛಾಯಾಗ್ರಾಹಕ ಧನಪಾಲ್ “ಹುಲಿಬೇಟೆ” ಬಗ್ಗೆ ಅನುಭವ ಹಂಚಿಕೊಂಡರು. ಧನುಬಾಯಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಅರವಿಂದ ರಾಜ್ ಸಂಕಲನ ಹಾಗೂ ಮಂಜು ನಾಗಪ್ಪ ಸಾಹಸ ನಿರ್ದೇಶನವಿದೆ.