ಹೊಸಬರ ಬ್ಯಾಡ್ ಬ್ರೋ

ಹೊಸ ಕಲಾವಿದರು, ತಂತ್ರಜ್ಞರ ಸೇರಿಕೊಂಡು “ಬ್ಯಾಡ್ ಬ್ರೋ” ಚಿತ್ರ ಕೈಗೆತ್ತಿಕೊಂಡಿದ್ದಾರೆ. ಸದ್ಯಕ್ಕೆ ಶೀರ್ಷಿಕೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದು ಅನುಮತಿ ಸಿಕ್ಕ ನಂತರ ಪ್ರಚಾರದ ಕೆಲಸಗಳನ್ನು ಕೈಗೆತ್ತಿಕೊಳ್ಳಲು ತಂಡ ಮುಂದಾಗಿದೆ.

ಚೋಟಾ ಬಾಂಬೆ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವಹೊಂದಿರುವ ರಿಯಾಜ್ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಮೂಲದವರಾದ ಹಿನ್ನೆಲೆಯಲ್ಲಿ ಚಿತ್ರವನ್ನು ಆ ಭಾಗದಲ್ಲಿಯೇ ಸಂಪೂರ್ಣ ಚಿತ್ರೀಕರಣ ಮಾಡುವ ಉದ್ದೇಶವೊಂದಿದ್ದಾರೆ.

ಕಳೆದ ತಿಂಗಳು ಹೆಸರಿಡ ಚಿತ್ರಕ್ಕೆ ಮುಹೂರ್ತ ನಡೆಸಲಾಗಿದೆ. ಹಲವು ಸನ್ನಿವೇಶಗಳ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಮಳೆ ಸೇರಿದಂತೆ ವಿವಿಧ ಕಾರಣದಿಂದ ತಿಂಗಳಾಂತ್ಯಕ್ಕೆ ಇಲ್ಲವೇ ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಲು ಉದ್ದೇಶಿಸಿದ್ಧಾರೆ.

ಅಷ್ಟರ ನಡುವೆ ಚಿತ್ರದ ಶೀರ್ಷೀಕೆ ಪಕ್ಕಾ ಆದರೆ ಚಿತ್ರತಂಡ ಖುಷಿಯಿಂದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದೆ ಎಂದು ನಿರ್ದೇಕ ರಿಯಾಜ್ ಹೇಳಿದ್ದಾರೆ. ಬ್ಯಾಡ್ ಬ್ರೋ ಎನ್ನುವ ಹೆಸರು ಇಡಲು ಉದ್ದೇಶಿಸಲಾಗಿದ್ದು, ಇದೇ ಹೆಸರಲ್ಲಿ ನೋಂದಣೀಗೂ ಅರ್ಜಿ ಸಲ್ಲಿಸಲಾಗಿದೆ. ಬ್ಯಾಡ್ ಬ್ರೋ ಎಂದರೆ ಕೆಟ್ಟ ಸಹೋದರ . ಹಳ್ಳಿಯಿಂದ ನಗರಕ್ಕೆ ಬರುವ ಆತ ಇಲ್ಲಿ ಏನೆಲ್ಲಾ ಕೆಟ್ಟ ಕೆಲಸ ಕಲಿತು ಅದನ್ನು ನಗರದ ಮೇಲೆ ಹಾಕುತ್ತಾನೆ ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನುವ ವಿವರ ನೀಡಿದರು ಅವರು.

ಇದೊಂದು ಎಮೋಷನ್ ಥ್ರಿಲ್ಲರ್, ಸೆಂಟಿಮೆಂಟ್ ಇರುವ ಚಿತ್ರ. ಹೊಸ ತಂಡ ಸೇರಿಕೊಂಡು ಹೊಸ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಚಿತ್ರೀಕರಣ ಮಾಡಲು ಸಜ್ಜಾಗಿದ್ದೇವೆ. ಈ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಅಲ್ಲದೆ ಇಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲವಿದೆ.ಅದಕ್ಕಾಗಿ ಎಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು.

ಚಿತ್ರದಲ್ಲಿ  ಸಂತೋಷ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ನಾಯಕಿಯಾಗಿ ನಿಧಿ ನಟಿಸುತ್ತಿದ್ದಾರೆ.ಇವರಿಗೆ ಇದು ಮೊದಲ ಚಿತ್ರ.ನಾಯಕನ ಸಹೋದರಿಯಾಗಿ ಶೃತಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರ ನಿರ್ದೇಶನ ಮಾಡುವ ಜೊತೆಗೆ ಪಾತ್ರದಲ್ಲಿಯೂ ನಟಿಸುತ್ತಿದ್ದೇನೆ ಎಂದರು

ಉಳಿದಂತೆ ಮಂಜು,ಭರತ್ ಸೇರಿದಂತೆ ಹೊಸ ಕಲಾವಿದರು ಇದ್ದಾರೆ. ಚಿತ್ರಕ್ಕೆ  ಅರುಣ್ ಕ್ಯಾಮರ ಮತ್ತು ಸೂರಜ್ ಶೆಟ್ಟಿ ಸಂಗೀತ ನೀಡುತ್ತಿದ್ಧಾರೆ. ಚಿತ್ರದಲ್ಲಿ ಕೆಲಸ ಮಾಡುವ ಬಹುತೇಕರು ಕಿರುಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.ಈಗ ಎಲ್ಲರೂ ಜೊತೆಯಾಗಿ ಸಿನಿಮಾ ಮಾಡುತ್ತಿದ್ದೇವೆ ಎಂದರು. ಹುಬ್ಬಳ್ಳಿಯ ರೈಲು ನಿಲ್ದಾಣ ಮತ್ತು ಮಾರುಕಟ್ಟೆ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ.ಚಿತ್ರಕ್ಕೆ ಎಚ್.ಪಿ ಬಂಡವಾಳ ಹೂಡುತ್ತಿದ್ದಾರೆ .ಕಂಟೆಂಟ್ ಆಧಾರಿತ ಚಿತ್ರ ವಾದ ಹಿನ್ನೆಲೆಯಲ್ಲಿ ಶೀಘ್ರ ಚಿತ್ರೀಕರಣ ಮುಗಿಸುವ ಉದ್ದೇಶವೊಂದಲಾಗಿದೆ ಎಂದರು.