ಕನ್ನಡಲ್ಲಿ ಇತ್ತೀಚೆಗೆ ಹೊಸ ಹೊಸ ಶೀರ್ಷಿಕೆಯ ಮೂಲಕ ತಂಡ ಚಿತ್ರರಂಗದಲ್ಲಿ ಗಮನ ಸೆಳೆಯುವ ಕೆಲಸ ಮಾಡುತ್ತಿದೆ.ಅದರ ಸಾಲಿಗೆ ಮತ್ತೊಂದು ಸೇರ್ಪಡೆ ” ನೋಡದ ಪುಟಗಳು”.
ಸಾಪ್ಟ್ ವೇರ್ ಇಂಜಿನಿಯರ್ ಆಗಿರುವ ನಿರ್ಮಾಪಕ,ನಿರ್ದೇಶಕ ವಂಸತ್ ಕುಮಾರ್ ಅವರ ಮೊದಲ ಪ್ರಯತ್ನ ಇದು.
ಚಿತ್ರದ ಆಡಿಯೋ ಬಿಡುಗಡೆಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ,ನಿರ್ದೇಶಕ ವಿಕ್ಟರಿ ವಾಸು, ಡಿಂಗ್ರಿನಾಗರಾಜ್ ಮತ್ತಿತರು ಚಿತ್ರದ ಬಗ್ಗೆ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ವಸಂತ್ ಕುಮಾರ್, ಪ್ಯಾಂಟಸಿ ಲವ್ ಸ್ಟೋರಿ, ಅದಕ್ಕೆ ಬೇರೆಯದೇ ಲೋಕ ಸೃಷ್ಟಿ ಮಾಡಲಾಗಿದೆ.ಎಲ್ಲರ ಜೀವನದಲ್ಲಿ ಕೆಟ್ಟ ಸಮಯ ಬರುತ್ತದೆ.ಅದನ್ನು ನಾವು ನಿಯಂತ್ರಣ ಮಾಡಬೇಕು. ಇಲ್ಲಂದ್ರೆ ಅದು ನಮ್ಮನ್ನು ನಿಯಂತ್ರಣ ಆಗಲಿದೆ ಎಂದರು.
ಸಾಪ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗೆ ಒಂದು ತಿಂಗಳು ರಜೆ ಹಾಕಿ ಚಿತ್ರ ಮಾಡಿದ್ದೇನೆ ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ ಎನ್ನುವ ವಿವರ ನೀಡಿದರು
ನಟಿ ಕಾವ್ಯ ರಮೇಶ್, ಚೌಕಾಚಾರ ಚಿತ್ರದ ಬಳಿಕ ಎರಡನೇ ಚಿತ್ರಮ ಶೀರ್ಷಿಕೆ ಕೇಳಿ ಕುತೂಹಲ ಆಗಿತ್ತು.ನಿರ್ದೇಶಕರು ಮೊದಲಿನಿಂದ ಕ್ಲೈಮಾಕ್ಸ್ ಹೇಳಿಲ್ಲ. ಮೆಕಿಂಗ್ ಚೆನ್ನಾಗಿ ಮೂಡಿ ಬಂದಿದೆ ಎಂದರು. ನಾಯಕ ಪ್ರೀತಂ , ಹೊರನಾಡಿನ ಹುಡುಗ ಅನುಪಮ್ ಖೇರ್ ತರಬೇತಿ ಪಡೆದಿದ್ದೇನೆ. ಮಾಂಗಲ್ಯ ತಂತು ನಾನೇನಾ ಧಾರಾವಾಹಿ ಬಳಿಕ ಕಪೋ ಕಲ್ಪಿತ ಚಿತ್ರದಲ್ಕಿ ನಟಿಸಿದ್ದೆ.ಎರಡನೇ ಚಿತ್ರ ಎಂದರು. ಛಾಯಾಗ್ರಾಹಕ ಕುಮಾರ್, ಸಂಗೀತ ವಿಘ್ನೇಶ್ ಮೆನನ್ ಮಾಹಿತಿ ಹಂಚಿಕೊಂಡರು.