ಹೊಸಬರ ನನಗೂ ಲವ್ವಾಗಿದೆ

ಚಂದನವನಕ್ಕೆ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿದ್ದು ಅವುಗಳ‌ ಸಾಲಿಗೆ ’ನನಗೂ ಲವ್ವಾಗಿದೆ ಚಿತ್ರವು ಹೊಸ ಸೇರ್ಪಡೆಯಾಗಿದೆ.

ಚಿತ್ರದ ಹೆಸರು ಕೇಳಿದೊಡನೆ ಇದೊಂದು ಲವ್ ಸ್ಟೋರಿ ಇರಬಹುದೆಂಬ ಭಾವನೆ ಬರುತ್ತದೆ. ಆದರೆ ಇದರಲ್ಲಿ ಲವ್ ಜೊತೆಗೆ ಕೆಲವು ಕುತೂಹಲಕಾರಿ ಸನ್ನಿವೇಶಗಳನ್ನು ನೋಡಬಹುದು ಎನ್ನುತ್ತಾರೆ ಚಿತ್ರದ ಕತೆ ಬರೆದು ನಿರ್ಮಾಣ ಮಾಡುತ್ತಿರುವ ಕೆ.ನೀಲಕಂಠನ್.

ನಿರ್ಮಾಣದ ಜೊತೆಗೆ ಖಳನ ಪಾತ್ರಕ್ಕೆ ಬಣ್ಣ ಹೆಚ್ಚುತ್ತಿರುವ ನೀಲಕಂಠನ್ ಕಾಳಿ ಅಮ್ಮನ ಭಕ್ತರಾಗಿರುವುದರಿಂದ ಶ್ರೀ ಕಾಳಿ ಅಮ್ಮನ್ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕತೆ-ಸಂಭಾಷಣೆ-ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿರುವ ಬಿ.ಎಸ್.ರಾಜಶೇಖರ್ ಅವರಿಗೆ ನನಗೂ ಲವ್ವಾಗಿದೆ ಚಿತ್ರವು ಐದನೇಯದಾಗಿದೆ.

ಅಪ್ಪ ಬಂಡವಾಳ ಹೂಡುತ್ತಿರುವ ಸಿನಿಮಾಕ್ಕೆ ಮಗ ಸೋಮವಿಜಯ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.ತೇಜಸ್ವಿನಿರೆಡ್ಡಿ ನಾಯಕಿ. ಹಾಗೂ ಹೊಸಬರಿಗೆ ವಿಪುಲವಾದ ಅವಕಾಶ ಮಾಡಿಕೊಡಲಿದ್ದಾರೆ.

ಆರು ಹಾಡುಗಳಿಗೆ ಸಂಗೀತ ಬಿ.ಆರ್.ಹೇಮಂತಕುಮಾರ್, ಛಾಯಾಗ್ರಹಣ ಮಧುಆರಾಧ್ಯ, ಸಾಹಸ ಸುಪ್ರೀಂಸುಬ್ಬು, ನೃತ್ಯ ಟಿ.ಕೆ.ಸತೀಶ್, ನಿರ್ಮಾಣ ನಿರ್ವಹಣೆ ಎಸ್.ಎನ್.ವೀರಣ್ಣ ಅವರದಾಗಿದೆ. ಬೆಂಗಳೂರು, ಬೆಳಗಾಂ ಮತ್ತು ಚಿಕ್ಕಮಗಳೂರು, ಸಕಲೇಶಪುರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಫ್ರೇಮ್ ಶಾಟ್ ಸ್ಟುಡಿಯೋ ಅರ್ಪಿಸುತ್ತಿರುವ ಚಿತ್ರದ ಮಹೂರ್ತ ಸಮಾರಂಭವು ಮೇ 17ರಂದು ನಡೆಯಲಿದೆ ಎಂದು ತಂಡವು ತಿಳಿಸಿದೆ.