ಹೊಸಬರ ಅಯುಕ್ತ ಟೀಸರ್ ಬಿಡುಗಡೆ

ಪ್ರತಿಭಾವಂತ ಹೊಸ ಮುಖಗಳ ಸೇರಿಕೊಂಡು ತಯಾರು ಮಾಡಿರುವ ‘ಅಯುಕ್ತ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್, ಲಹರಿ ವೇಲು ಸೇರಿದಂತೆ ಮತ್ತಿತರರು ಪಾಲ್ಗೊಂಡು ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.

ಆಕ್ಷನ್ ಕಟ್ ಹೇಳಿರುವ ಕನಸು ರಮೇಶ್ ಮಾತನಾಡಿ ಸುಮಾರು 250 ನಾಟಕ ನಿರ್ದೇಶಿಸಿದ ಅನುಭವವಿದೆ.ಹೀಗಾಗಿ ನಿರ್ದೇಶನ ಸುಲಭವಾಯಿತು. ಸಂಪಾದನೆಗೋಸ್ಕರ ಪದವಿ ಮಾಡಬೇಡಿ. ಜ್ಞಾನಾರ್ಜನೆಗೋಸ್ಕರ ಪದವಿ ಮಾಡಿ. ಪೋಷಕರು ಮಕ್ಕಳು ಇಷ್ಟಪಡುವ ಕೆಲಸಕ್ಕೆ ಸ್ವಾತಂತ್ರ ಕೊಡಬೇಕು. ಅದನ್ನು ಬಿಟ್ಟು ಬಲವಂತ ಮಾಡಿದರೆ ಮಕ್ಕಳು ಯಾವ ರೀತಿ ದಿಕ್ಕು ತಪ್ಪುತ್ತಾರೆ. ಕೊನೆಗೆ ಏನಾಗುತ್ತಾರೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಪ್ರೀತಿಯೊಂದಿಗೆ ಹೇಳಲಾಗಿದೆ ಎಂದು ವಿವರ ನೀಡಿದರು.

ಚಿತ್ರದಲ್ಲಿ ಹಲವು ತಿರುವುಗಳಿವೆ. ಮಂಡ್ಯ, ಕಿರುಗಾವಲು. ಮಳವಳ್ಳಿ, ಬೆಳಕವಾಡಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ವಿವರ ನೀಡಿದರು. ಫಯುಸುಪಿಯಾನ್, ಅದ್ದೂರಿಬಸವ, ರಮೇಶ್, ಜಾನ್ಸನ್, ರುತ್ವಿಕಾ, ಸೌಂದರ್ಯಗೌಡ, ಚನ್ನಬಸಪ್ಪ ಪಾತ್ರದ ಪರಿಚಯ ಮಾಡಿಕೊಂಡರು. ವಿಶ್ವಾಸ್ ಆರ್.ಗಂಗಡ್ಕರ್ ನಿರ್ಮಾಣ ಮಾಡಿದ್ದಾರೆ. ವಿಲಿಯಂದೃತ್ ಸಂಗೀತ,ಅರಸಿಕೆರೆ ದೀಪು ಛಾಯಾಗ್ರಹಣವಿದೆ.