ಹೊಸಬರೊಂದಿಗೆ ವಿಜಯ್ ಸಂಚಾರ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ’ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ‌ ಅದುವೇ‌ “ಅವಸ್ಥಾಂತರ’ . ಈ ಮೂಲಕ ಹೊಸಬರೊಂದಿಗೆ ಸಂಚಾರ ಆರಂಭಿಸಿದ್ದಾರೆ.
ಮಠ ಗುರುಪ್ರಸಾದ್,ಮಾಲಿವುಡ್ ಸ್ಟಾರ್ ನಟರಾದ ಮುಮ್ಮಟಿ ಮತ್ತು ಮೋಹನ್‌ಲಾಲ್ ಸೇರಿದಂತೆ ಹಲವ ಚಿತ್ರಗಳಿಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ಜಿ.ದೀಪಕ್‌ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು.ಜೊತೆಗೆ‌ ನಿರ್ಮಾಣದಲ್ಲಿ ಪಾಲುದಾರರು.
ಹದಿಹರೆಯದ ಯುವಕನೊಬ್ಬ ತನಗೆ ಅರಿವಿಲ್ಲದೆ ಬಯಕೆಗಳು, ಕಾಮನೆಗಳು ಹುಟ್ಟಿಕೊಂಡು, ಹೇಗೆ ಆತನನ್ನು ಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ. ಹಾಗೆಯೇ ಅದರಿಂದ ಏನೆಲ್ಲಾ ಕಷ್ಟಗಳು, ಅವಸ್ಥೆ, ಅನಾಹುತಗಳು ನಡೆಯುತ್ತವೆ ಎಂಬುದನ್ನು ತಿಳಿ ಹಾಸ್ಯದ ಮೂಲಕ ತೋರಿಸಲಾಗುತ್ತಿದೆ. ಜೊತೆಗೆ ಅರ್ಥಪೂರ್ಣ ಸಂದೇಶವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗುವುದು ಎನ್ನುತ್ತಾರೆ ನಿರ್ದೇಶಕರು.
ರಂಜನಿರಾಘವನ್, ದಿಶಾಕೃಷ್ಣಯ್ಯ ನಾಯಕಿಯರು. ಉಳಿದಂತೆ ಕಲಾವಿದರು, ತಂತ್ರಜ್ಘರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆ.
ಯುವ ಸಿನಿಮಾಸಕ್ತರು ಸೇರಿಕೊಂಡು ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ದೀಪಾವಳಿ ಹಬ್ಬದ ಸಲುವಾಗಿ ಶೀರ್ಷಿಕೆ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಗಿದೆ.
ಜನವರಿ ಮೊದಲವಾರದಲ್ಲಿ ಮಹೂರ್ತ ಆಚರಿಸಿಕೊಳ್ಳಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿಕೊಂಡಿದೆ. .