ಹೊಸಪೇಟೆ ಸಿಡಿಪಿಓ ಸಿಂಧು ಯಲಿಗಾರ್

ಹೊಸಪೇಟೆ,ನ.19: ಹೊಸಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ಸಿಂಧು ಯಲಿಗಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಇಂದು ನಿಕಟಪೂರ್ವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿದ್ದ ಅಮರೇಶ್ ಅವರು ಸಿಂಧು ಯಲಿಗಾರ್ ಅವರಿಗೆ ಅಧಿಕಾರ ವಹಿಸಿಕೊಟ್ಟರು. ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಎಸಿಡಿಪಿಓ ಎಳೆನಾಗಪ್ಪ ಸೇರಿದಂತೆ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.