ಹೊಸಪೇಟೆ ಸಮೀಪ  ಮೈನವಿರೇಳಿಸಿದ ಮೋಟಾರ್‌ ಸ್ಫೋರ್ಟ್ಸ್‌–128 ಸ್ಪರ್ಧಿಗಳು ಭಾಗಿ‌‌


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.10: ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಆಶ್ರಯದಲ್ಲಿ ವಿಜಯನಗರದ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಎರಡು ದಿನಗಳ ಮೋಟಾರ್‌ ಸ್ಫೋರ್ಟ್‌ ಶನಿವಾರ ಇಲ್ಲಿಗೆ ಸಮೀಪದ ರಾಜಾಪುರದಲ್ಲಿ ಆರಂಭವಾಗಿದ್ದು, ಮಾಡಿಫೈಡ್‌ ಕ್ಲಾಸ್‌ ವಿಭಾಗದಲ್ಲಿ ಮನೋಜ್‌ ಬಿರಾದಾರ್‌ ಮತ್ತು ಸಚಿನ್‌ ಗಡಶೆಟ್ಟಿ 385 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಪ್ರೊ ಮಾಡಿಫೈಡ್ ಕ್ಲಾಸ್‌, ಮಾಡಿಫೈಡ್‌ ಕ್ಲಾಸ್‌, ಸ್ಟಾಕ್‌ ಪೆಟ್ರೋಲ್‌, ಡೀಸೆಲ್‌ ಕ್ಲಾಸ್, ಥಾರ್ ಕ್ಲಾಸ್‌, ಲೇಡಿಸ್ ಸ್ಟಾಕ್‌  ಮತ್ತು ಲೇಡಿಸ್‌ ಮಾಡಿಫೈಡ್‌ ವಿಭಾಗಗಳಲ್ಲಿ ಒಟ್ಟು 64 ವಾಹನಗಳು ಪಾಲ್ಗೊಂಡಿದ್ದು, 128 ಮಂದಿ ಇದರಲ್ಲಿ ಪಾಲ್ಗೊಂಡರು.
ಫಲಿತಾಂಶ: ಮಾಡಿಫೈಡ್ ಕ್ಲಾಸ್‌: ಮನೋಜ್‌ ಬಿರಾದಾರ್‌/ಸಚಿನ್ ಗಡಶೆಟ್ಟಿ (385), ಅತುಲ್‌ ಥಾಮಸ್‌/ರಾಜೀವ್‌ ಲಾಲ್‌ (377), ಮೊಹಮ್ಮದ್ ಫಹೀದ್/ರಾಜೀವ್ ಲಾಲ್ (372)
ಪ್ರೊ ಮಾಡಿಫೈಡ್ ಕ್ಲಾಸ್‌: ಬಿಜೇಂದರ್ ಸಿಂಗ್‌/ಗಜೇಂದರ್ ಸಿಂಗ್‌ (272), ಎಂ.ರಾಮ್‌ಬಾಬು/ಟಿ.ಕುಮಾರಸ್ವಾಮಿ (270), ರಜತ್‌ ತ್ಯಾಗಿ/ದಲ್‌ಜಿತ್‌ ಸಿಂಗ್‌ (260)
ಸ್ಟಾಕ್‌ ಪೆಟ್ರೋಲ್‌: ಕಿಶನ್‌ ಕಾಂತ್‌/ಅಶ್ವಿನ್‌ ಶಿಂದೆ (360), ಪ್ಲಬನ್ ಪಟ್ನಾಯಕ್‌/ಶೆಲ್ಟನ್‌ ಗೋಮ್ಸ್‌ (350), ನೀಲೇಶ್‌/ತನುಜಾ (349).
ಡೀಸೆಲ್‌ ಕ್ಲಾಸ್‌: ವಿನಯ ಕುಮಾರ್‌/ವಿಕ್ರಂ ಗೌಡ (382), ಪೂಣಚ್ಚ/ ಗೌರವ್ ಅಯ್ಯಪ್ಪ (362), ವೈಭವ್ ರೆಡ್ಡಿ/ಅನುರಾಗ್‌ (360)
ಥಾರ್ ಕ್ಲಾಸ್‌: ನವೀನ್‌ ಪುಲಿಗಿಲ್ಲ/ಗಿರಿ ಬಾಬು (374), ನವೀನ್ ನಾಯ್ಡು/ ಸುಶಾಂತ್ ಅದಾತೆ (370), ವಿನಯ್‌ ಎಚ್‌./ಸಚಿನ್‌ (359).
ಲೇಡಿಸ್‌ ಸ್ಟಾಕ್‌: ಪ್ರೇರಣಾ ಭಲ್ಲಾ/ರವಿ ಭಲ್ಲಾ (320)
ಲೇಡಿಸ್ ಮಾಡಿಫೈಡ್‌: ಅನ್ವಿತಾ ಅನಿಕೇತ್/ಅನಿಕೇತ್‌ (160)