ಹೊಸಪೇಟೆ ಸಬ್ ರಿಜಿಸ್ಟರ್ ಪ್ರಭಾಕರ ಕಚೇರಿ ಮನೆ ಮೇಲೆ ಎಸಿಬಿ ದಾಳಿ

ಬಳ್ಳಾರಿ, ಡಿ.31: ಆದಾಯಕ್ಕಿಂತ ಹೆಚ್ಚನ ಅಕ್ರಮ ಅಸ್ತಿ ಗಳಿಕೆ ಜೊತೆಗೆ ಕೆಲ ಆಸ್ತಿಗಳನ್ನು ಅಕ್ರಮವಾಗಿ ರಿಜಿಸ್ಟರ್ ಮಾಡಿಕೊಟ್ಟಿರೋ ಆರೋಪದ ಮೇಲೆ ಬಳ್ಳಾರಿಯ ಎಸಿಬಿ ಅಧಿಕಾರಿಗಳು ಹೊಸಪೇಟೆ ಸಬ್‍ರಿಜಿಸ್ಟರ್ ಪ್ರಭಾಕರ್ ಅವರ ಹೊಸಪೇಟೆಯ ಮನೆ ಕಚೇರಿ ಮತ್ತು ಕೂಡ್ಲಿಗಿ ತಾಲೂಕಿನ ವೀರಾಪುರ ಗ್ರಾಮದ ಫಾರಂ ಹೌಸ್ ಮೇಲೆ ಇಂದು ದಾಳಿ ಮಾಡಿದ್ದಾರೆ.
ಬಳ್ಳಾರಿಯ ಎಸಿಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ.
ಮನೆ ಮತ್ತು ಕಚೇರಿಗಳನ್ನು ಅವರು ಹೊಂದಿರುವ ದಾಕಲೆಗಳ ಪರೀಶೀಲನೆ ನಡೆದಿದೆ. ಮನೆಯಲ್ಲಿ ಚಿನ್ನಾಭರಣ ನಗದು ಹಣ ಮತ್ತು ಲಕ್ಷಾಂತರ ರೂಪಾಐಇ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.