ಹೊಸಪೇಟೆ ರಸ್ತೆ ಸಾರಿಗೆ ಅಧಿಕಾರಿಗಳಿಂದ ಫೋನ್-ಇನ್

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ9: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಬುಧವಾರ ಮಧ್ಯಾಹ್ನ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರಯಾಣಿಕರ ಕುಂದುಕೊರತೆ ಆಲಿಸಿ, ಪರಿಹಾರ ನೀಡಿದರು. .
ಗ್ರಾಮೀಣ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ  ಕರೆಗಳು ಬಂದಿದ್ದು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ಕರೆಯಾಗಿರುವುದು ವಿಶೇಷವಾಗಿತು. ಬಂದವು. ಕೋವಿಡ್‍ನಿಂದಾಗಿ ಬಸ್‍ಗಳ ಓಡಾಟದ ಸಮಯ ಅದಲು ಬದಲಾಗಿದೆ. ಇದರಿಂದ ಶಾಲಾ-ಕಾಲೇಜ್‍ಗಳಿತೆ ತೆರಳಲು ತಮಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಗ್ರಾಮೀಣ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಓಡಿಸಲಾಗುವುದು. ಈ ಕೂಡಲೇ ಸಂಬಂಧಿಸಿದ ಘಟಕಗಳ ಅಧಿಕಾರಿಗಳಿಗೆ ಸೂಚಿಸುವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಹೇಳಿದರು.
ಹರಪನಹಳ್ಳಿಯಿಂದ ಉಚ್ಚಂಗಿದುರ್ಗ ಮಾರ್ಗವಾಗಿ ದಾವಣಗೆರೆಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಹರಪನಹಳ್ಳಿ ಭಾಗದಿಂದ ಹಲವರು ಕರೆ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿ. ಶೀನಯ್ಯ ಅವರು ಈ ಮಾರ್ಗದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಬಹುತೇಕ ಗ್ರಾಮೀಣ ಭಾಗದಿಂದ ಕರೆಗಳು ಹರಿದು ಬಂದವು. ಅದರಲ್ಲಿ ಬಸ್‍ಗಳನ್ನ ಗ್ರಾಮೀಣ ಭಾಗಗಳಿಗೆ ಬಿಡುವಂತೆ ಬೇಡಿಕೆಗಳು ಕೇಳಿ ಬಂದವು. ಹಳ್ಳಿಗಳಿಗೆ ಬಸ್ ಗಳನ್ನು ಬಿಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಫೋನ್‍ನಲ್ಲಿಯೇ ಉತ್ತರಿಸಿದರು.
ಫೋನ್‍ಇನ್ ಕಾರ್ಯಕ್ರಮದಲ್ಲಿ ಒಟ್ಟು 24 ಕರೆಗಳನ್ನು ಸ್ವೀಕರಿಸಿ ಅವರು, ಸ್ಥಳದಲ್ಲೇ ಕೆಲ ಸಮಸ್ಯೆಗಳನ್ನ ಇತ್ಯರ್ಥಗೊಳಿಸಿದರು. ಈ ಸಂದರ್ಭದಲ್ಲಿ ಡಿಟಿಒ ಬಸವರಾಜ್ ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.