ಹೊಸಪೇಟೆ ಯಲ್ಲಿ ಶ್ರೀ ಪ್ರೌಢದೇವರಾಯ ಉಚಿತ ಪ್ರಸಾದನಿಲಯ ನಿರ್ಮಾಣ ಕಾಮಗಾರಿಗೆ ಸಚಿವರಿಂದ ಚಾಲನೆ.

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ 25 : ನಾಡಿನ ಶರಣ ಪರಂಪರೆಗೆ ವೀರಶೈವ ಮಠಗಳ ಕೊಡುಗೆ ಅವಿಸ್ಮರಣೀಯ ವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದ ಆವರಣದಲ್ಲಿ ನೂತನ ವಾಗಿ ನಿರ್ಮಾಣವಾಗಲಿರುವ ಶ್ರೀ ಪ್ರೌಢದೇವರಾಯ ಉಚಿತ 100 ವಿದ್ಯಾರ್ಥಿಗಳ ಪ್ರಸಾದ ನಿಲಯ  ಭೂಮಿ ಪೂಜೆ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿದ ಅವರು
ನಾಡಿನ ಪರಂಪರೆಯಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ನಡೆಯಬಾರದ ಕೃತ್ಯಗಳು ನಡೆಯುತ್ತಿದ್ದ ಆದರೂ ನಾವು ನಮ್ಮ ಧಾರ್ಮಿಕ ಕಾರ್ಯ ಮುಂದುವರೆಸಬೇಕು. ಸಮಾಜದ ಬಡವ, ದೀನ ದಲಿತರಿಗೆ ಆಶ್ರಯವಾಗಲಿದೆ. ದೇಶದ ಎಲ್ಲಾ ಕೋರ್ಸ್‌ಗಳನ್ನು ವೀರಶೈವ ಮಠಗಳು ನಾಡಿನಾದ್ಯಂತ ಶೈಕ್ಷಣಿಕ ಕಾರ್ಯ ಮಾಡಿತ್ತೀವೆ ಸರ್ಕಾರ ಮಾಡದ ಕಾರ್ಯವನ್ನು ಮಠಗಳು ಮಾಡಿತ್ತೀವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ ಸಚಿವ  ಆನಂದ ಸಿಂಗ್ ಮಾತನಾಡಿ ಕೊಟ್ಟೂರು ಸ್ವಾಮಿ ಮಠ ಸರ್ವಧರ್ಮದ ಶಾಂತಿಯ ತೋಟವಾಗಿದೆ ವಿಜಯನಗರ ಜಿಲ್ಲಾ ಆರಂಭ ಸೇರಿದಂತೆ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳಿಗೂ ಸದಾ ಮುಂದೆ ನಿಂತು ಮಾಡುತ್ತಿದ್ದಾರೆ. ಪ್ರಸಾದನಿಲಯ ನಿರ್ಮಾಣದ ಕಾರ್ಯದಲ್ಲಿ ಅಗತ್ಯ ನೆರವುನೀಡುವುದಾಗಿ ಹೇಳಿದರು.

ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಡಾ.ಸಂಗನಬಸವ ಮಹಾಸ್ವಾಮಿಗಳು, ಒಳಬಳ್ಳಾರಿಯ ಸಿದ್ಧಲಿಂಗ ಮಹಾಸ್ವಾಮಿಗಳು, ಮುಪ್ಪಿನ ಬಸವಲಿಂಗ ದೇವರು, ಕೊಟ್ಟೂರು ದೇಶಿಕರು, ಬಾಗಲಕೋಟ ಶಾಸಕ ವೀರಣ ಚರಂತಿಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ,  ಸಾಲಿ ಸಿದ್ದಯ್ಯಸ್ವಾಮಿ, ಶರಣಸ್ವಾಮಿ, ವಿಶ್ವನಾಥ ಹಿರೇಮಠ, ಚನ್ನಬಸವನಗೌಡ, ಅಸೂಂಡಿ ನಾಗರಾಜಗೌಡ,  ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.