ಹೊಸಪೇಟೆ-ಬೆಂಗಳೂರು ರೈಲು ಸಂಚಾರ ವೇಳೆಯಲ್ಲಿ ಬದಲಾವಣೆ

ಬಳ್ಳಾರಿ ಡಿ 28 : ಜಿಲ್ಲೆಯ ಹೊಸಪೇಟೆ ನಗರದಿಂದ ಹೊರಡುವ ಹೊಸಪೇಟೆ-ಬೆಂಗಳೂರು ಪ್ಯಾಸೆಂಜರ್ ರೈಲ್ವೆಯನ್ನು ನಾಳೆ (ಡಿ.29) ಯಿಂದ ಎಕ್ಸ್‍ಪ್ರೆಸ್ ರೈಲಾಗಿ ಪರಿವರ್ತಿಸಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸಂಚಾರ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ಹೊಸಪೇಟೆ-ಯಶವಂತಪುರ (ಗಾಡಿ ಸಂಖ್ಯೆ 06207/208) ರೈಲು ಪ್ರತಿದಿನ ಸಂಜೆ 5ಕ್ಕೆ ನಗರದಿಂದ ನಿರ್ಗಮಿಸಿ ಮರುದಿನ ಬೆಳಿಗ್ಗೆ 4ಕ್ಕೆ ಯಶವಂತಪುರ ತಲುಪುತ್ತಿದ್ದು, ಅದೇ ರೀತಿ ರಾತ್ರಿ 8.15ಕ್ಕೆ ಯಶವಂತಪುರದಿಂದ ನಿರ್ಗಮಿಸಿ ಮರುದಿನ ಬೆಳಿಗ್ಗೆ 8.30ಕ್ಕೆ ನಗರ ತಲುಪುತ್ತದೆ.