ಹೊಸಪೇಟೆ ನೂತನ ಡಿವೈಎಸ್‍ಪಿ ಟಿ.ಮಂಜುನಾಥ

ಸಂಜೆವಾಣಿ ವಾರ್ತೆಹೊಸಪೇಟೆ ಆ28: ಹೊಸಪೇಟೆಯ ನೂತನ ಡಿವೈಎಸ್‍ಪಿ ಆಗಿ ಟಿ.ಮಂಜುನಾಥ ನೇಮಕಗೊಂಡಿದ್ದು ಅಧಿಕಾರ ವಹಿಸಿಕೊಂಡಿದ್ದಾರೆ.ಹೊಸಪೇಟೆಯ ಡಿವೈಎಸ್‍ಪಿ ವಿಶ್ವನಾಥ ಕುಲಕರ್ಣಿಯವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಜುನಾಥ ಟಿ ನೇಮಕವಾಗಿದ್ದು ಅಧಿಕಾರ ವಹಿಸಿಕೊಂಡರು ಹೊಸಪೇಟೆಯಲ್ಲಿ ಸಬ್ ಇನ್ಸ್‍ಪೇಕ್ಟರ್ ಆಗಿ ಕಾರ್ಯನಿರ್ವಹಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಆರೋಪಿಗಳ ಪತ್ತೆಕಾರ್ಯದಲ್ಲಿದ್ದಾಗ ಪೈರಿಂಗ್‍ನಲ್ಲಿ ಗಾಯಗೊಂಡು ಆರೋಪಿಗಳ ಪತ್ತೆಕಾರ್ಯದಲ್ಲಿ ತೊಡಗುವ ಮೂಲಕ ಈ ಭಾಗದ ಜನ ಮಾನಸದಲ್ಲಿ ಮನೆಮಾತಾಗಿದ್ದು ಮಂಜುನಾಥ ಹೊಸಪೇಟೆ ನೂತನ ಜಿಲ್ಲೆಯಾದ ನಂತರ ಡಿವೈಎಸ್‍ಪಿ ಸ್ಥಾನಕ್ಕೆ ಬಂದಿರುವುದು ಈ ಭಾಗದ ಅಭಿಮಾನಿಗಳಿಗೆ ಹರ್ಷವಾಗಿದ್ದು ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಿವೃತ್ತ ಪೊಲೀಸ ಅಧಿಕಾರಿ ಗಜಾನನ ನಾಯ್ಕ್ ಸೇರಿದಂತೆ ಅನೇಕ ಸ್ವಾಗತಿಸುತ್ತಾ ಜಿಲ್ಲೆಯಾದ ಸಂದರ್ಭದಲ್ಲಿ ಅಧಿಕಾರಿಗಳಿಂದ ರಚನಾತ್ಮಕ ಕೆಲಸಗಳಾಗಲಿ ಎಂದು ಶುಭಕೊರಿದ್ದಾರೆ. 
One attachment • Scanned by Gmail