ಹೊಸಪೇಟೆ ನಗರಸಭೆ ಮತ್ತೆ ಬಿಜೆಪಿ ಮಡಿಲಿಗೇ


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜು6: ಪಕ್ಷೇತರ ಸದಸ್ಯರು ಬಿಜೆಪಿ ಸೇಪರ್ಡೆಯಿಂದ ಸಂಖ್ಯಾಬಲದ ಮೇಲೆ ಬಾವುಟ ಹಾರಿಸಿದ್ದ ಬಿಜೆಪಿ ತನ್ನ ಪ್ರಾಭಲ್ಯವನ್ನು ಮೆರೆದು ಮತ್ತೆ ಅಧ್ಯಕ್ಷ ಉಪಾಧ್ಯಕ್ಷಗಾದಿಯನ್ನು ಅಲಂಕರಿಸಿ ತನ್ನ ಬಾವುಟ ಅಡಚಣೆ ಇಲ್ಲದೆ ಮುಂದುವರೆಸುವಲ್ಲಿ ಯಶಸ್ವಿಯಾಗಿದೆ.
ಶುಕ್ರವಾರ ಹೊಸಪೇಟೆ ನಗರಸಭೆಯ ಸಭಾಂಗಣದಲ್ಲಿ ಹೊಸಪೇಟೆಯ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಚುನಾವಣಾಧಿಕಾರಿಗಳು ಆದ ಹೊಸಪೇಟೆ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ನಿಗದಿತ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ  ಬಂದ ನಾಮಪತ್ರಗಳಾದ 30ನೇವಾರ್ಡ್ ಸದಸ್ಯೆ ಎ.ಲತಾ ಅಧ್ಯಕ್ಷ ಸ್ಥಾನಕ್ಕೆ ಸೂಚಕರಾಗಿ ಎಲ್.ಎಸ್.ಆನಂದ್ ಅನುಮೋದಕರಾಗಿ . ಸರವಣ್ಣನ್ ನಿಂದ ಸಹಿ ಪಡೆದು ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಉಮೇದವಾರರಾಗಿ  7ನೇ ವಾರ್ಡ್ ಸದಸ್ಯೆ ಬಿ.ಕನಕಮ್ಮ  24ನೇ ವಾರ್ಡ್ ಸದಸ್ಯ ರಾಘವೇಂದ್ರ ಸೂಚನೆ ಹಾಗೂ ಅನುಮೋದಕರಾಗಿ 8ನೇ ವಾರ್ಡ್ ಸದಸ್ಯ ಹುಲಗಪ್ಪ ಇವರಿಂದ ಸಹಿ ಪಡೆದು ನಾಮಪತ್ರ ಸಲ್ಲಿಸಿದರು.
ಸಮಯವಾಗುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ಸದಸ್ಯರ ಅಭಿಪ್ರಾಯ ಸಂಗ್ರಹಿಸಲು ಮುಂದಾದರು
ಇನ್ನು ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 5 ನೇ ವಾರ್ಡ್ ಸದಸ್ಯ ರೂಪೇಶ್ ಕುಮಾರ ಏಕಮಾತ್ರ ವ್ಯಕ್ತಿ ನಾಮಪತ್ರ ಸಲ್ಲಿಸಿದರು ಎಂದು ಚುನಾವಣಾಧಿಕಾರಿ ಆದ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ  ತಿಳಿಸಿ
ಚುನಾವಣೆ ಪ್ರಕ್ರಿಯೆ ಅಂತ್ಯವಾಗುತ್ತಿದ್ದಂತೆಯೇ ಚುನಾವಣಾಧಿಕಾರಿ ಸಿದ್ಧರಾಮೇಶ್ವರ ಅಧ್ಯಕ್ಷರಾಗಿ ಎ.ಲತಾ ಕನಕಮ್ಮ ಇವರನ್ನು ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾದರು.
ಮತ್ತು ಉಪಾಧ್ಯಕ್ಷರಾಗಿ ರೂಪೇಶ್ ಕುಮಾರ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಘೋಷಿಸಿದರು.
ಮಾಜಿ ಅಧ್ಯಕ್ಷೆ ಸುಂಕಮ್ಮ, ಮಾಜಿ ಉಪಾಧ್ಯಕ್ಷ ಎಲ್.ಎಸ್.ಆನಂದ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ ಪೌರಾಯುಕ್ತ ಮನೋಹರ್ ಸೇರಿದಂತೆ ಹಾಜರಿದ್ದ ಬಿಜೆಪಿ ಸದಸ್ಯರು ಮತ್ತೆ ಬಿಜೆಪಿ ವಿಜಯಕ್ಕೆ ಸಂಭ್ರಮಿಸಿ ಪರಸ್ಪರ ಸಿಹಿ ಹಂಚಿಕೆ ಮಾಡಿದರು.
ಮೊದಲಬಾರಿ ಚುನಾವಣೆಯಲ್ಲಿ ರಾಜಕೀಯ ನಾಯಕರ ಪ್ರವೇಶವಾಗದೆ ಸದಸ್ಯರು ಮತ್ತು ಅವರ ಹಿಂಬಾಲಕರು ಮಾತ್ರ ಪಾಲ್ಗೊಂಡಿದ್ದು ಅಂತಹ ಕಳೆ ಏನು ಕಾಣಲಿಲ್ಲಾ.

One attachment • Scanned by Gmail