ಹೊಸಪೇಟೆ ನಗರಸಭೆಯ ವಿಶೇಷ ಸಾಮಾನ್ಯ ಸಭೆ ಅನೇಕ ವರ್ಷಗಳ ಸಮಸ್ಯೆಗಳನ್ನು ಪರಿಹರಿಸಲಾಗಿದೆ.


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ25: ಅನೇಕ ದಶಕಗಳ ಸಮಸ್ಯೆಗಳನ್ನು ಪರಿಹರಿಸಲು ನಗರಸಭೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಆದಾಗ್ಯೂ ಸಮಸ್ಯೆಗಳಿದ್ದು ಸ್ಪಂದಿಸಬೇಕು ಇಲ್ಲವಾದಲ್ಲಿ ಸಂಬಂದಿಸಿದ ಅಧಿಕಾರಿಗಳೇ ಹೊಣೆಮಾಡಲಾಗುವುದು ಎಂದು ಪೌರಾಯುಕ್ತ ಮನೋಹರ ಎಚ್ಚರಿಕೆ ನೀಡಿದರು.
ಹೊಸಪೇಟೆ ನಗರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಅನೇಕ ನಗರಸಭಾ ಸದಸ್ಯರ ದೂರವಾಣಿ ಕರೆಗೆ ವಾಲ್ ಮ್ಯಾನ್ ಗಳು, ಕಾರ್ಮಿಕರು ಸ್ಪಂದಿಸುತ್ತಿಲ್ಲಾ ಎಂದು ದೂರುತ್ತಿದ್ದಂತೆ ಖಾರವಾದ ಪೌರಾಯುಕ್ತ ಮನೋಹರ ಸದಸ್ಯರು ಸೇರಿದಂತೆ ಯಾರೇ ದೂರವಾಣಿ ಕರೆ ಮಾಡಿದರು ಸ್ಪಂದಿಸುತ್ತಿಲ್ಲಾ ಎನ್ನುವುದಾದರೆ ಹೇಗೆ ? ಯಾರೇ ಅಗೌರವ ತೋರಿದರು ಸಹಿಸಲಾಗದು ಇದು ಕೊನೆಯ ಎಚ್ಚರಿಕೆ ಗುತ್ತಿಗೆ ಆದಾರದ ಸಿಬ್ಬಂದಿಯಾಗಿದ್ದರೆ ತೆಗೆದುಹಾಕಿ, ಖಾಯಂ ಸಿಬ್ಬಂದಿಯಾಗಿದ್ದಾರೆ ಅಮಾನತ್ತಿಗೆ ಶಿಫಾರಸ್ತು ಮಾಡಿ ಎಂದು ಸಹಾಯಕ ಕಾರ್ಯಾನಿರ್ವಾಹಕ ಅಭಿಯಂತರರಿಗೆ ಆದೇಶಿಸಿದರು.
ಉಳಿದಂತೆ ಯು.ಜಿ.ಡಿ ಕಾಮಗಾರಿ, ರಾಡಿಂಗ್ ಮಿಷನ್ ಖರೀದಿ, ಹೊಸ ಸಕ್ಕಿಂಗ್ ಮಿಷನ್, ಜೆ.ಸಿ.ಬಿ ಖರೀದಿ, ಕೈಲಾಸರಥ ಖರೀದಿಗೆ ಅನುಮತಿ, ಬೀದಿನಾಯಿಗಳ ಸಂತಾನಹರಣ ಶಸ್ತ್ರಾಸ್ತ್ರಗಳ ಚಿಕಿತ್ಸೆ ಮಾಡಲು ಆದೇಶ ನೀಡುವುದು ಸೇರಿದಂತೆ ಇತರೆ ಸಹಾಯಧನ ಹಂಚಿಕೆ ಪ್ರೋತ್ಸಾಹ ಧನ ವಿತರಿಸಲು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆಗೆ ಸಭೆ ಅನುಮೋದಿಸಿತು. ಇವರೆಗೂ ಯುಜಿಡಿ ಸಂಪರ್ಕ ಪಡೆಯದ ಮನೆಗಳನ್ನು ಗುರುತಿಸಿ ಸಂಪರ್ಕ ಕಲ್ಪಿಸಲು ಕ್ರಮವಹಿಸುವುದಾಗಿ ತಿಳಿಸಲಾಯಿತು.
ಅಧ್ಯಕ್ಷ ಸುಂಕಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಉಪಾಧ್ಯಕ್ಷ ಎಲ್.ಎಸ್.ಆನಂದ್,  ಅಭಿಯಂತರ ಸತೀಶ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.